ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲೊಂದು ಅಂಥಾ ವಿಡಿಯೋ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಾಟ್ ನೃತ್ಯ ಪ್ರದರ್ಶನಗಳಿಲ್ಲದೆ ಮದುವೆಗಳು ಅಪೂರ್ಣವಾಗಿವೆ ಮತ್ತು ಇವು ನೆಟ್ಟಿಗರನ್ನು ಗೆಲ್ಲುತ್ತಲೇ ಇವೆ. ಅಂಥದ್ದೇ ಒಂದು ವಿಡಿಯೋ ಇದು.
ಮದುವೆ ಮನೆಯಲ್ಲಿ ಇಬ್ಬರು ಪುರುಷರು ತಮ್ಮ ಪ್ರದರ್ಶನದೊಂದಿಗೆ ಡ್ಯಾನ್ಸ್ ಫ್ಲೋರ್ಗೆ ಕಿಚ್ಚು ಹಚ್ಚಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅಬ್ದುಲ್ಲಾ ರಫೀಕ್ ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಚಿಕ್ಕದಾದರೂ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಅಬ್ದುಲ್ಲಾ ಶಾಜರ್ ಶಫೀಕ್ ಜೊತೆಗೆ ಮ್ಯಾಶಪ್ನ ಆಕರ್ಷಕ ಬೀಟ್ಗಳಿಗೆ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರೂ ಸಾಂಪ್ರದಾಯಿಕ ಕಪ್ಪು ಬಟ್ಟೆಗಳಲ್ಲಿ ಜೋಡಿಯಾಗಿ ನರ್ತಿಸಿದರು. ಇದು ಮದುವೆ ಮನೆಯ ಹೈಲೈಟ್ ಆಗಿತ್ತು. ಮದುಮಕ್ಕಳು ಕೂಡ ಸಂತೋಷದಿಂದ ನರ್ತಿಸಿದರು. ಅಸಲಿಗೆ ಈ ನೃತ್ಯ ಮಾಡುವಂತೆ ವಧುವೇ ಕೋರಿಕೊಂಡಿದ್ದಳು.