alex Certify ಪುರುಷರು ಈ ಕಾರಣಕ್ಕೆ ಅಗತ್ಯವಾಗಿ ಸೇವಿಸಬೇಕು ಕೇಸರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರು ಈ ಕಾರಣಕ್ಕೆ ಅಗತ್ಯವಾಗಿ ಸೇವಿಸಬೇಕು ಕೇಸರಿ

ಕೇಸರಿ ಅತ್ಯಂತ ರುಚಿಕರ ಮಸಾಲೆ ಪದಾರ್ಥಗಳಲ್ಲೊಂದು. ಸಿಹಿ ತಿನಿಸುಗಳ ರುಚಿಯನ್ನು ಕೇಸರಿ ದುಪ್ಪಟ್ಟು ಮಾಡುತ್ತದೆ. ಈ ಕೇಸರಿಯನ್ನು ಪುರುಷರು ಸೇವನೆ ಮಾಡುವುದು ಅತ್ಯಂತ ಸೂಕ್ತ. ಪುರುಷರ ವೈವಾಹಿಕ ಜೀವನದ ಸುಖವನ್ನು ಹೆಚ್ಚಿಸಬಲ್ಲ ಶಕ್ತಿ ಕೇಸರಿಗಿದೆ. ಪುರುಷರ ದೈಹಿಕ ದೌರ್ಬಲ್ಯವನ್ನು ಕೇಸರಿ ನೀಗಿಸಬಲ್ಲದು.

ಕೇಸರಿಯನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಕೆಲವರು ಕೇಸರಿಯನ್ನು ನೀರಲ್ಲಿ ನೆನೆಸಿ ಕುಡಿಯುತ್ತಾರೆ, ಇದರಿಂದ ಸಾಕಷ್ಟು ಪ್ರಯೋಜಗಳಿವೆ. ಕೆಲವೊಂದು ರೋಗಗಳನ್ನು ಕೂಡ ಕೇಸರಿ ದೂರ ಇಡಬಲ್ಲದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಬಹುದು. ಅಥವಾ ಹಲ್ವಾಗಳಿಗೆ ಕೂಡ ಇದನ್ನು ಹಾಕಲಾಗುತ್ತದೆ.

ಕೇಸರಿ ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಕಂಡುಬರುವ ಅತ್ಯಗತ್ಯ ವಸ್ತುವಾಗಿದೆ. ಕೇಸರಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ ಜೊತೆಗೆ ಹಲವಾರು ಅಗತ್ಯ ಪೋಷಕಾಂಶಗಳಿವೆ. ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ ಕೇಸರಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಕರಿಸುತ್ತದೆ.

ಕೆಲವರಿಗೆ ಮುಟ್ಟಿನ ಸಮಯದಲ್ಲಿ ವಿಪರೀತ ನೋವು ಅನುಭವಿಸುತ್ತಾರೆ. ನಾಲ್ಕೈದು ಕೇಸರಿ ಎಸಳುಗಳನ್ನು ನೀರಿನಲ್ಲಿ ಕುದಿಸಿ ನಂತರ ಈ ನೀರನ್ನು ಫಿಲ್ಟರ್ ಮಾಡಿ ಕುಡಿದರೆ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಕೇಸರಿ ಸೇವನೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೇಸರಿ ಬೆರೆಸಿದ ನೀರನ್ನು ಕುಡಿಯುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಮುಖದಲ್ಲಿ ಮೊಡವೆಗಳು ಏಳುವುದಿಲ್ಲ.

ವಿವಾಹಿತ ಪುರುಷರಲ್ಲಿ ದೌರ್ಬಲ್ಯ ಅಥವಾ ಆಯಾಸ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ. ಇಂತಹ ಸಮಸ್ಯೆ ಆದಾಗ ಕೇಸರಿ ಸೇವನೆ ಮಾಡಬೇಕು. ಇದರಿಂದ ಪುರುಷರ ಎನರ್ಜಿ ಹೆಚ್ಚುತ್ತದೆ. ವಿವಾಹಿತರ ಲೈಂಗಿಕ ಬದುಕು ಸುಖಮಯವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...