ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ದೈಹಿಕ ದೌರ್ಬಲ್ಯ ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಆಸಕ್ತಿ ಕಳೆದುಕೊಳ್ಳುವಂತೆ ಮಾಡ್ತಿದೆ. ನಿಯಮಿತವಾಗಿ ಕೆಲ ಆಹಾರ ಸೇವನೆ ಮಾಡುವುದ್ರಿಂದ ಲೈಂಗಿಕ ಜೀವನದಲ್ಲಿ ಮತ್ತೆ ಸಂತೋಷ ತರಬಹುದಾಗಿದೆ.
ನಿಶಕ್ತಿ ಉತ್ಸಾಹವನ್ನು ಕಡಿಮೆ ಮಾಡುತ್ತದೆ. ಇದ್ರಿಂದಾಗಿ ಲೈಂಗಿಕ ಜೀವನ ಕೂಡ ನೀರಸವಾಗುತ್ತದೆ. ಸದಾ ಉತ್ಸಾಹದಿಂದಿರಲು, ದೇಹ ಶಕ್ತಿ ಪಡೆಯಲು ಬಾಳೆಹಣ್ಣು ಬಹಳ ಮುಖ್ಯ. ಇದು ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ಹೊಂದಿರುತ್ತದೆ. ದೈಹಿಕ ದೌರ್ಬಲ್ಯವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಕನಿಷ್ಠ ಎರಡು ಬಾಳೆ ಹಣ್ಣನ್ನು ಪ್ರತಿ ದಿನ ಸೇವನೆ ಮಾಡಬೇಕು.
ಅನೇಕರು ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಆದ್ರೆ ಹಾಲು ಪುರುಷರಿಗೆ ದೈಹಿಕ ಶಕ್ತಿಯನ್ನು ನೀಡುವ ಅತ್ಯುತ್ತಮ ಮಾರ್ಗ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಂದು ಕಪ್ ಹಾಲನ್ನು ಸೇವಿಸಬೇಕು.
ಆಹಾರ ತಜ್ಞರ ಪ್ರಕಾರ, ಕರ್ಜೂರ ಆರೋಗ್ಯಕ್ಕೆ ಒಳ್ಳೆಯದು. ಕರ್ಜೂರ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಸಕ್ಕರೆ ಪ್ರಮಾಣ ಇರದ ಕಾರಣ ಇದನ್ನು ಮಧುಮೇಹಿಗಳು ಸೇವಿಸಬಹುದು.
ಪ್ರತಿದಿನ ಒಂದು ಮೊಟ್ಟೆ ಸೇವಿಸುವುದು ಒಳ್ಳೆಯದು. ದೇಹಕ್ಕೆ ಇದರಿಂದ ಸಾಕಷ್ಟು ಪೋಷಕಾಂಶ ಮತ್ತು ಶಕ್ತಿ ಸಿಗುತ್ತದೆ. ತೂಕ ಕಡಿಮೆ ಇರುವ ವ್ಯಕ್ತಿ ಇದ್ರ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ.