ದೇಹದಲ್ಲಿ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆಗಳು ಅಪಾಯಕಾರಿ ರೋಗಗಳ ಲಕ್ಷಣಗಳಾಗಿರುವ ಸಾಧ್ಯತೆ ಇದೆ. ಹಾಗಾಗಿ ಪುರುಷರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಪಡೆಯಿರಿ.
ಮೂತ್ರ ವಿಸರ್ಜನೆಯ ಸಮಯದಲ್ಲಿ ನಿಮಗೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಏಕೆಂದರೆ ಇದು ಪ್ರಾಸ್ಟೇಟ್ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಪ್ರಾಸ್ಟೇಟ್ ತುಂಬಾ ದೊಡ್ಡದಾದಾಗ ನೋವು ಪ್ರಾರಂಭವಾಗುತ್ತದೆ.
ಚರ್ಮದ ಮೇಲೆ ಮಚ್ಚೆ ಕಂಡುಬರುತ್ತದೆ. ಆದರೆ ಈ ಮಚ್ಚೆಗಳು ತುಂಬಾ ವೇಗವಾಗಿ ಬೆಳೆಯುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಯಾಕೆಂದರೆ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವಾಗಿದೆ.
ಎದೆನೋವು, ಗ್ಯಾಸ್, ಎದೆ ಸುಡುವಿಕೆ ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಹೃದಯಾಘಾತದ ಲಕ್ಷಣವೂ ಆಗಿರಬಹುದು. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಹೃದಯಾಘಾತದ ಸಮಸ್ಯೆ ಕಾಡುತ್ತದೆ. ಹಾಗಾಗಿ ಪುರುಷರು ತೀವ್ರವಾದ ಎದೆ ನೋವನ್ನು ನಿರ್ಲಕ್ಷಿಸಬೇಡಿ.
ಪುರುಷರು ವೃಷಣದಲ್ಲಿ ಉಂಡೆಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ಭೇಟಿ ನೀಡಿ. ಏಕೆಂದರೆ ಇದು ವೃಷಣ ಕ್ಯಾನ್ಸರ್ ನ ಮುಖ್ಯ ಲಕ್ಷಣವಾಗಿದೆ.