ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡವೊಂದರಲ್ಲಿ ಇದ್ದ ಮಕ್ಕಳನ್ನು ರಕ್ಷಿಸಲು ಚರಂಡಿ ಪೈಪ್ ಒಂದನ್ನು ಹತ್ತುತ್ತಿರುವ ಸಾಹಸಿಗರ ವಿಡಿಯೋವೊಂದನ್ನು ರಷ್ಯಾದ ಕೊಸ್ಟ್ರೋಮಾದಲ್ಲಿ ದಾಖಲಿಸಲಾಗಿದೆ.
24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ ಸೂಕ್ಷ್ಮ ಜೀವಿ…!
ಈ ಕ್ಲಿಪ್ ಅನ್ನು ಆ ಕಟ್ಟಡವಿರುವ ಬೀದಿಯ ನಿವಾಸಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ನೆಲದಿಂದ ಬಹುತೇಕ 30 ಮೀಟರ್ ಎತ್ತರದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಒಂದು ಕೈಯಲ್ಲಿ ಮಗುವೊಂದನ್ನು ಎತ್ತಿಕೊಳ್ಳಲು ಯತ್ನಿಸುತ್ತಾ, ಹಾಗೇ ಮತ್ತೊಂದು ಕೈಯಲ್ಲಿ ಪೈಪ್ ಅನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಯಾವುದೇ ಗೊಂದಲವಿಲ್ಲ; ಎಲ್ಲರೂ ಒಗ್ಗಟ್ಟಾಗಿದ್ದೇವೆ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಸಿಎಂ
ಇದಾದ ಮೇಲೆ ಆತ ಆ ಮಗುವನ್ನು ಅದೇ ಪೈಪ್‌ಗೆ ನೇತುಹಾಕಿಕೊಂಡಿರುವ ಮತ್ತೊಂದು ವ್ಯಕ್ತಿಗೆ ಕೊಟ್ಟಿದ್ದಾನೆ. ಇದಾದ ಮೇಲೆ ಅದೇ ಪೈಪ್‌ನಲ್ಲಿರುವ ಮೂರನೇ ವ್ಯಕ್ತಿಗೆ ಮಗುವನ್ನು ಸಾಗಿಸಿ, ಅಲ್ಲಿಂದ ಅದನ್ನು ನೆಲದ ಮೇಲಿರುವ ಮಹಿಳೆಗೆ ಕೊಡಲಾಗಿದೆ.
https://twitter.com/AmazingPosts_/status/1403656039925489668?ref_src=twsrc%5Etfw%7Ctwcamp%5Etweetembed%7Ctwterm%5E1403656039925489668%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fmen-climb-drainpipe-to-save-children-from-house-fire-rescue-video-goes-viral-watch%2F770988