ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಬೇರೆ ರೀತಿ ಹಾಗೂ ಪುರುಷರು ಬೇರೆ ರೀತಿ ಒತ್ತಡವನ್ನು ಕಡಿಮೆ ಮಾಡಿಕೊಳ್ತಾರಂತೆ.
ಪುರುಷರು ಸೆಕ್ಸ್ ಹಾಗೂ ಹಸ್ತಮೈಥುನದ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ತಾರಂತೆ. ಆದ್ರೆ ಮಹಿಳೆಯರು ಆಹಾರ ಸೇವಿಸಿ ಒತ್ತಡ ಕಡಿಮೆ ಮಾಡಿಕೊಳ್ತಾರಂತೆ. ಸೆಕ್ಸ್ ಮೂಲಕ ಮನಸ್ಸಿನಲ್ಲಿರುವ ನಕಾರಾತ್ಮಕ ಚಿಂತನೆಯನ್ನು ಹೊಡೆದೋಡಿಸಲು ಪುರುಷರು ಪ್ರಯತ್ನ ಮಾಡ್ತಾರೆ. ಮಹಿಳೆಯರು ಅಡುಗೆ ಬಗ್ಗೆ ಹೆಚ್ಚು ಗಮನ ನೀಡುತ್ತಾರೆಂದು ಸಂಶೋಧಕರು ಹೇಳಿದ್ದಾರೆ.
ಪುರುಷರು ಬೇಗ ನೆಮ್ಮದಿ ಸಿಗುವ ಉಪಾಯ ಅನುಸರಿಸುತ್ತಾರಂತೆ. ಆದ್ರೆ ಮಹಿಳೆಯರು ಹಿಂದೆ ನಡೆದ ಘಟನೆಗಳನ್ನು ನೆನೆಸಿಕೊಳ್ಳುತ್ತಾರೆ. ಸಂಭಾಷಣೆ ಮೂಲಕ ತಮ್ಮ ನೋವನ್ನು ತೋಡಿಕೊಂಡು ಒತ್ತಡ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಾರಂತೆ.
ಮಹಿಳೆಯರು ಒತ್ತಡ ಕಡಿಮೆ ಮಾಡಿಕೊಳ್ಳಲು ಕೊಬ್ಬಿನ ಹಾಗೂ ಸಿಹಿ ಆಹಾರವನ್ನು ಸೇವನೆ ಮಾಡ್ತಾರೆಂದೂ ಸಂಶೋಧನೆ ಹೇಳಿದೆ.