alex Certify ದಲಿತ ಯುವಕನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ; ಶಾಕಿಂಗ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಲಿತ ಯುವಕನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ; ಶಾಕಿಂಗ್ ವಿಡಿಯೋ ವೈರಲ್

ಹುಡುಗಿ ಹೆಸರಿನಲ್ಲಿ ಕರೆ ಮಾಡಿ ದಲಿತ ಯುವಕನನ್ನು ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳ ಗುಂಪೊಂದು ಆತನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದ್ದು, ಈ ಕುಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಸಾದ್ ಖೈರ್ನಾರ್ ಎಂಬ ಈ ಯುವಕನನ್ನು ಹುಡುಗಿ ತರ ಕರೆ ಮಾಡಿದಂತೆ ನಟಿಸಿ ದುಷ್ಕರ್ಮಿಗಳ ಗುಂಪು ನಾಸಿಕ್ ನ ಯಾವ್ಲಾ ಮಾರ್ಕೆಟ್ ಸಮೀಪ ಕರೆಸಿಕೊಂಡು ಬಳಿಕ ಅಪಹರಿಸಿದೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನನ್ನು ಅರೆ ಬೆತ್ತಲೆಗೊಳಿಸಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಈ ಗುಂಪು ಆತನ ಮೇಲೆ ಮನ ಬಂದಂತೆ ಥಳಿಸಿದ್ದು, ಜೊತೆಗೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ವೈರಲ್ ಮಾಡಬೇಕೆಂದು ಅವರವರೇ ಮಾತನಾಡಿಕೊಂಡಿದ್ದಾರೆ.

ಈ ಘಟನೆ ಹಲವು ದಿನಗಳ ಹಿಂದೆಯೇ ನಡೆದಿದ್ದರೂ ಸಹ ಪ್ರಾಣ ಭಯದಿಂದ ಪ್ರಸಾದ್ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಆಗ ತನಿಖೆಗೆ ಮುಂದಾದ ಪೊಲೀಸರು ಇದೀಗ ಕೃತ್ಯದ ಸಂಪೂರ್ಣ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

— Saba Khan (@ItsKhan_Saba) July 9, 2024

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...