ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಾಯಕನಟನಾಗಿ ಅಭಿನಯಿಸಿರುವ ‘ವಿಷ್ಣುಪ್ರಿಯ’ ಚಿತ್ರದ “ಏಳು ಗಿರಿಗಳ” ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ಹಾಡಿಗೆ ಹರೀಶ್ ಶಿವರಾಮಕೃಷ್ಣನ್ ಧ್ವನಿಯಾಗಿದ್ದು, ಗೋಪಿ ಸುಂದರ್ ಅವರ ಸಂಗೀತ ನಿರ್ದೇಶನವಿದೆ. ಇನ್ನುಳಿದಂತೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರದಲ್ಲಿ ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿದ್ದು, ಅಚ್ಯುತ್ ರಾವ್ , ಸುಚೀಂದ್ರ ಪ್ರಸಾದ್, ನಿಹಾಲ್ ರಾಜ್ ಉಳಿದ ತಾರಂಗಣದಲ್ಲಿದ್ದಾರೆ. ಕೆ ಮಂಜು ತಮ್ಮ ಮಂಜು ಮೂವೀಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ರಂಜಿತ್ ವೇಷಭೂಷಣ, ವಿಕ್ರಮ್ ಮೋರ್, ವಿನೋದ್, ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ, ಹಾಗೂ, ಸುರೇಶ್ urs ಸಂಕಲನವಿದೆ.