ರಮಣ ರಾಜ್ ಕೆವಿ ನಿರ್ದೇಶನದ ವಿಜಯ್ ರಾಘವೇಂದ್ರ ಅಭಿನಯದ ‘FIR 6to6’ ಚಿತ್ರದ ‘ಸಖ ನಿನ್ನ ಮುಖವನ್ನ’ ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚೇತನ್ ನಾಯಕ್ ಹಾಗೂ ಸರಯೂ ಈ ಹಾಡಿಗೆ ಧ್ವನಿಗೂಡಿಸಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಸತೀಶ್ ಬಾಬು ಮತ್ತು ಎಂಎಸ್ ತ್ಯಾಗರಾಜ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರವನ್ನು ಯಶ ಫಿಲಂಸ್ ಬ್ಯಾನರ್ ನಲ್ಲಿ ಭವ್ಯ ಆರ್ ನಿರ್ಮಾಣ ಮಾಡಿದ್ದು, ಮನೋಜ್ ಗೌಡ ಮತ್ತು ಆದಿಕೇಶವ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ನಾಗೇಂದ್ರ ಯು. ಆರ್. ಎಸ್ ಸಂಕಲನ, ಥ್ರಿಲ್ಲರ್ ಮಂಜು, ವಿಕ್ರಮ್, ರಿಸ್ಕ್ ಶಿವ ಅವರ ಸಾಹಸ ನಿರ್ದೇಶನವಿದ್ದು, ಓಂ ಜಿ ಛಾಯಾಗ್ರಹಣವಿದೆ. ವಿಜಯ ರಾಘವೇಂದ್ರ ಸೇರಿದಂತೆ ಸಿರಿರಾಜ್, ನಾಗೇಂದ್ರ ಅರಸ್, ಯಶ್ ಶೆಟ್ಟಿ, ಬಾಲರಾಜು, ಕಾಮಿಡಿ ಕಿಲಾಡಿ ಸಂತು, ಗಜ ವಿದ್ಯಾಭರಣ, ಆದಿ ಕೇಶವ , ರತನ್, ಯಶ, ಶ್ವೇತಾ, ತೆರೆ ಹಂಚಿಕೊಂಡಿದ್ದಾರೆ.