ಕೆ ನರೇಂದ್ರಬಾಬು ನಿರ್ದೇಶನದ 13 ಚಿತ್ರದ ಮೆಲೋಡಿ ಹಾಡೊಂದು ಇಂದು ಯೂಟ್ಯೂಬಲ್ಲಿ ಬಿಡುಗಡೆಯಾಗಿದೆ ಎಂಥಾ ಶುಭಯೋಗ ಈ ಹಾಡಿಗೆ ಸುಗಂದ್ ಶೇಖರ್ ಮತ್ತು ಜನನಿ ಸಂಜೀವಿ ಧ್ವನಿಯಾಗಿದ್ದು, ಶೋಗನ್ ಬಾಬು ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಸಂತೋಷ್ ನಾಯಕ್ ಅವರ ಸಾಹಿತ್ಯವಿದೆ
ನೈಜ ಘಟನಾಧಾರಿತ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ಶೃತಿ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದು, ಕೆ ಸಂಪತ್ ಕುಮಾರ್, ಮಂಜುನಾಥ್ ಗೌಡ, ಮಂಜುನಾಥ್ ಹೆಚ್ ಎಸ್ ಮತ್ತು ಕೇಶವಮೂರ್ತಿ ನಿರ್ಮಾಣ ಮಾಡಿದ್ದಾರೆ. ಕೆ ಗಿರೀಶ್ ಕುಮಾರ್ ಸಂಕಲನ, ಅಜಯ್ ಮಂಜು ನಾಯ್ಡು ಛಾಯಾಗ್ರಹಣ, ಕೆಎಸ್ ಜಯಸಿಂಹ ಸಂಭಾಷಣೆ, ಶಶಿಕುಮಾರ್ ನೃತ್ಯ ನಿರ್ದೇಶನವಿದೆ.