ಕಿಶನ್ ಬಲ್ನಾಡ್ ನಿರ್ದೇಶನದ ಸುನಿಲ್ ಅಭಿನಯದ ‘ಒಲವಿನ ಪಯಣ’ ಚಿತ್ರದ ‘ಗಾಳಿ ಗಂಧ’ ಎಂಬ ಮೆಲೋಡಿ ಹಾಡು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಈ ಗೀತೆಗೆ ಧ್ವನಿಯಾಗಿದ್ದು, ಸಾಯಿ ಸರ್ವೇಶ್ ಅವರ ಸಂಗೀತ ಹಾಗೂ ಸಾಹಿತ್ಯವಿದೆ.
ಈ ಚಿತ್ರವನ್ನು ಮುಳಗುಂದ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಎಸ್ ಮುಳಗುಂದ್ ನಿರ್ಮಾಣ ಮಾಡಿದ್ದು, ಸುನಿಲ್ ಸೇರಿದಂತೆ ಖುಷಿ, ಪ್ರಿಯ ಹೆಗಡೆ, ಬಾಲರಾಜ್ವಾಡಿ, ಪದ್ಮಜಾ ರಾವ್, ನಾಗೇಶ್, ಮಾಯ, ಪೃಥ್ವಿರಾಜ್, ಸುಧಾಕರ್, ಧನಂಜಯ್, ಸಮೀಕ್ಷ ಹಾಗೂ ದೃತಿ ತೆರೆ ಹಂಚಿಕೊಂಡಿದ್ದಾರೆ. ಕೀರ್ತಿರಾಜ್ ಸಂಕಲನ, ಜೀವನ್ ಗೌಡ ಛಾಯಾಗ್ರಹಣ ಹಾಗೂ ರಾಮು ನೃತ್ಯ ನಿರ್ದೇಶನವಿದೆ.