
ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಹೆಚ್.ಡಿ.ಕುಮರಸ್ವಾಮಿ, ಮೇಕೆದಾಟು ಯೋಜನೆ ಅವರ ಕನಸಿನ ಕೂಸಂತೆ. 50-60 ಕೋಟಿ ಇದ್ದ ಆಸ್ತಿಯನ್ನು 1400 ಕೋಟಿ ಮಾಡುವ ಕನಸು ಅವರದ್ದು ಎಂದು ಕಿಡಿಕಾರಿದ್ದಾರೆ.
ಎರಡನೇ ಬಾರಿ ಸಿಎಂ, ಹಣಕಾಸು ಸಚಿವನಾಗಿ ನಾನು ಮೇಕೆದಾಟು ಯೋಜನೆ ತಂದೆ. 450 ಕೋಟಿ ವೆಚ್ಚದಲ್ಲಿ ನೀರು ತರುವ ಯೋಜನೆ ತಂದಿದ್ದು ನಾನು. ಇವರು ಮೇಕೆದಾಟು ಯೋಜನೆ… ಜನರಿಗೆ ಕುಡಿಯುವ ನೀರು ಕೊಡುತ್ತೇವೆ, ಕೃಷಿಗೆ ನೀರು ಹರಿಸುತ್ತೇವೆ ಎಂದು ಪಾದಯಾತ್ರೆ ನಾಟಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.