ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆಗೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ. ಪಾದಯಾತ್ರೆ ತಡೆಗೆ ಆದೇಶ ಹೊರಡಿಸಲಾಗಿದೆ.
ರಾಮನಗರ ಜಿಲ್ಲಾಡಳಿತಕ್ಕೆ ಈ ಕುರಿತಾಗಿ ಸೂಚನೆ ನೀಡಲಾಗಿದ್ದು, ಯಾವುದೇ ವಾಹನ ಅಥವಾ ವ್ಯಕ್ತಿ ಬರದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಕೊರೋನಾ ಕಾರಣದಿಂದ ರಾಜ್ಯದಲ್ಲಿ ಪ್ರತಿಭಟನೆ, ರ್ಯಾಲಿ ನಡೆಸಲು ನಿಷೇಧವಿದ್ದರೂ, ಕೆಲವರು ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಾರೆ. ಇದರಿಂದ ಸೋಂಕು ಹರಡಿ ಜೀವಗಳಿಗೆ ಹಾನಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಕ್ಷಣವೇ ನಿರ್ಬಂಧ ವಿಧಿಸಬೇಕೆಂದು ಸೂಚನೆ ನೀಡಲಾಗಿದೆ.
ಆದರೆ, ಹೈಕೋರ್ಟ್ ಸೂಚಿಸಿದರೆ ಪಾದಯಾತ್ರೆ ನಿಲ್ಲಿಸುವುದು, ಇಲ್ಲದಿದ್ದರೆ, ಮುಂದುವರಿಸುವುದು ಕಾಂಗ್ರೆಸ್ ನಾಯಕರ ತೀರ್ಮಾನವಾಗಿದೆ. ಪಾದಯಾತ್ರೆ ಮುಂದುವರಿಸಬೇಕೇ, ಬೇಡವೇ ಎಂಬುದರ ಬಗ್ಗೆ ಇವತ್ತು ಕಾಂಗ್ರೆಸ್ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಸರ್ಕಾರದಿಂದಲೂ ಪಾದಯಾತ್ರೆ ತಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಹೈಕೋರ್ಟ್ ಚಾಟಿ ಬೀಸಿದ ಹಿನ್ನಲೆಯಲ್ಲಿ ಇಂದೇ ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಹಾಕಲು ಸರ್ಕಾರದಿಂದ ಖಡಕ್ ಆದೇಶ ನೀಡಲಾಗಿದೆ. ಆದರೆ ಯಾವುದೇ ಕಾರಣಕ್ಕೆ ಪಾದಯಾತ್ರೆ ನಿಲ್ಲುವುದಿಲ್ಲವೆಂದು ಡಿಕೆ ಸಹೋದರರು ಹೇಳಿದ್ದು, ಪಾದಯಾತ್ರೆ ಮುಂದುವರೆಸಲು ಮುಂದಾಗಿದ್ದಾರೆ.