ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ 2 ನೇ ಹಂತದ ಪಾದಯಾತ್ರೆ ಕೈಗೊಂಡಿದ್ದು, ಇದರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಫೆಬ್ರವರಿ 27 ರಿಂದ ಪಾದಯಾತ್ರೆ ಆರಂಭವಾಗಲಿದೆ. ಮಾರ್ಚ್ 3 ರಂದು ಮುಕ್ತಾಯವಾಗಲಿದೆ. ಈ ಮೊದಲು ಫೆಬ್ರವರಿ 27 ರಿಂದ ಆರಂಭವಾಗಿ ಮಾರ್ಚ್ 5 ರವರೆಗೆ ಪಾದಯಾತ್ರೆ ನಡೆಯಬೇಕಿತ್ತು. ಬದಲಾವಣೆ ಮಾಡಿದ್ದು, ಮಾರ್ಚ್ 3 ರಂದು ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.
ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರ ಏರಿಕೆ ಕಂಡ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಫೆ. 27 ರಿಂದ ಪಾದಯಾತ್ರೆ ಮುಂದುವರೆಸಲಾಗುವುದು.