ಬಿಗ್ ಬಾಸ್ ಖ್ಯಾತಿಯ ಶಶಿ ಅಭಿನಯದ ಬಹು ನಿರೀಕ್ಷಿತ ‘ಮೆಹಬೂಬಾ’ ಚಿತ್ರದ ಟ್ರೈಲರ್ ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರವನ್ನು ಅನುಪ್ ಆಂಟೋನಿ ನಿರ್ದೇಶಿಸಿದ್ದು ಶ್ರೀ ಬಾಲಾಜಿ ಮೋಶನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಟ ಶಶಿ ನಿರ್ಮಾಣ ಮಾಡಿದ್ದಾರೆ.
ಕೆ ಎಂ ಪ್ರಕಾಶ್ ಸಂಕಲನ, ಕಿರಣ್ ಅಂಪಾಪುರ ಛಾಯಾಗ್ರಹಣವಿದೆ. ಶಶಿ ಅವರಿಗೆ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದು, ಕಬೀರ್ ದುಹಾನ್, ಸಿಂಗ್, ಸಲ್ಮಾನ್, ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಬಣ್ಣ ಹಚ್ಚಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿದ್ದು, ಇದೊಂದು ನೈಜ ಘಟನಾಧಾರಿತ ಸಿನಿಮಾ ಎಂದು ಹೇಳಲಾಗಿದೆ.