![BIG NEWS : 'ಮೆಹಬೂಬಾ' ಚಿತ್ರದ ಶೂಟಿಂಗ್ ವೇಳೆ ಅವಘಡ: 'ಬಿಗ್ ಬಾಸ್' ವಿನ್ನರ್ ಶಶಿಗೆ ಗಾಯ | Kannada Dunia | Kannada News | Karnataka News | India News](https://kannadadunia.com/wp-content/uploads/2024/01/mehabooba.png)
ಅನೂಪ್ ಆಂಟೋನಿ ನಿರ್ದೇಶನದ ‘ಮೆಹಬೂಬಾ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ತನ್ನ ಹಾಡುಗಳ ಮೂಲಕವೇ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಮೆಹಬೂಬ ಚಿತ್ರ ತಂಡ ಇಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಇದೇ ಮಾರ್ಚ್ 15 ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ʼಬಿಗ್ ಬಾಸ್ ಸೀಸನ್ 6’ ರಲ್ಲಿ ವಿಜೇತರಾಗಿದ್ದ ಶಶಿ ನಾಯಕ ನಟನಾಗಿದ್ದು, ಅವರಿಗೆ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದಾರೆ. ಶ್ರೀ ಭೈರವೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ನಡಿ ಪ್ರಸನ್ನ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಕಿರಣ್ ಹಂಪಾಪುರ ಛಾಯಾಗ್ರಹಣ, ರಘು ಶಾಸ್ತ್ರೀ ಸಂಭಾಷಣೆ ಹಾಗೂ ಮನು ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2024/02/35f06f62-9025-4ab5-8eba-384ccbae2cfe-1-582x1024.jpg)