ಮದುವೆ ಸಮಾರಂಭದಲ್ಲಿ ಮದರಂಗಿ ಕೂಡ ತನ್ನದೆ ಮಹತ್ವ ಪಡೆದಿದೆ. ಮದುವೆಯಲ್ಲಿ ಮೆಹಂದಿ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನ ಮಹಿಳೆಯರೂ ಮೆಹಂದಿ ಹಾಕಿಸಿಕೊಂಡು ಎಂಜಾಯ್ ಮಾಡ್ತಾರೆ.
ಮೆಹಂದಿ ಹಾಕಿಸಿಕೊಳ್ಳುವುದು ಖುಷಿಯ ವಿಷಯ. ಆದ್ರೆ ಸಮಾರಂಭ ಮುಗಿದು ವಾರವಾದ್ರೂ ಮದರಂಗಿಯ ರಂಗು ಹೋಗಿರುವುದಿಲ್ಲ. ಕೆಲವರಿಗೆ ಇದನ್ನು ತೆಗೆಯುವುದು ಅನಿವಾರ್ಯವಾಗಿರುತ್ತದೆ. ಆದ್ರೆ ಮೆಹಂದಿ ತೆಗೆಯಲಾಗದೆ ಒದ್ದಾಡ್ತಾರೆ. ಅಂತವರಿಗಾಗಿ ಇಲ್ಲಿದೆ ಸುಲಭ ಉಪಾಯ.
ಆಲಿವ್ ಆಯಿಲ್ : ಬೇಗ ಮೆಹಂದಿ ಬಣ್ಣ ಹೋಗಬೇಕೆಂದ್ರೆ ಆಲಿವ್ ಆಯಿಲ್ ಒಳ್ಳೆಯದು. ಒಂದು ಪಾತ್ರೆಯಲ್ಲಿ ಆಲಿವ್ ಆಯಿಲ್ ಹಾಕಿ ಕೈಯನ್ನು 10 ನಿಮಿಷ ಅದರಲ್ಲಿಡಿ. ನಂತ್ರ ಕೈಯನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಕ್ಲೋರಿನ್ : ಕ್ಲೋರಿನ್ ಗೆ ನೀರು ಸೇರಿಸಿ ಮೆಹಂದಿ ಹಾಕಿರುವ ಕೈಯನ್ನು 5 ನಿಮಿಷ ಅದರಲ್ಲಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
ಅಡುಗೆ ಸೋಡಾ : ಒಂದು ಬಟ್ಟಲಿನಲ್ಲಿ 3 ಚಮಚ ಅಡುಗೆ ಸೋಡಾ ಹಾಗು ಲಿಂಬೆ ರಸವನ್ನು ಮಿಕ್ಸ್ ಮಾಡಿ. ಅದನ್ನು ಕೈಗೆ ಹಾಕಿ ಉಜ್ಜಿಕೊಳ್ಳಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ತೊಳೆಯಿರಿ.
ಬ್ಲೀಚಿಂಗ್ ಪುಡಿ : ಮೆಹಂದಿಯನ್ನು ತೆಗೆದು ಹಾಕಲು ಬ್ಲೀಚಿಂಗ್ ಪುಡಿ ಸಹಾಯ ಮಾಡುತ್ತದೆ. ಮೆಹಂದಿ ಹಚ್ಚಿದ ಜಾಗಕ್ಕೆ ಬ್ಲೀಚಿಂಗ್ ಪುಡಿಯನ್ನು ಹಚ್ಚಿ, ಕೈ ಉಜ್ಜಿಕೊಳ್ಳಿ. ನಂತ್ರ ತೊಳೆಯಿರಿ. ಹೀಗೆ ಎರಡು ಮೂರು ಬಾರಿ ಮಾಡುವುದರಿಂದ ಮೆಹಂದಿ ಬಣ್ಣ ಮಾಸುತ್ತದೆ.
ಆಲೂಗಡ್ಡೆ : ಒಂದು ದಿನದಲ್ಲಿ ಮೆಹಂದಿ ಬಣ್ಣ ತೆಗೆದು ಹಾಕಲು ಬಯಸಿದ್ದರೆ ಆಲೂಗಡ್ಡೆ ರಸವನ್ನು ಕೈಗೆ ಹಚ್ಚಿಕೊಂಡು ಅದು ಆರಲು ಬಿಡಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.