ನಿಮ್ಮ ಊರಿನಲ್ಲಿ ಯಾರನ್ನಾದರೂ ಕರೆಯಬೇಕೆಂದರೆ ಹೇಗೆ ಕರೆಯುತ್ತೀರಿ? ಹೆಸರು ಹಿಡಿದು ತಾನೇ… ಆದರೆ ಈ ಗ್ರಾಮದಲ್ಲಿ ಹೆಸರು ಕರೆಯಲು, ನಿಗದಿತ ಸ್ವರ ಸಂಯೋಜನೆ ಮಾಡುತ್ತಾರೆ!
ಇದಕ್ಕೆ ‘ವಿಸ್ಲಿಂಗ್ ವಿಲೇಜ್ – ಶಿಳ್ಳೆ ಹಾಕುವ ಗ್ರಾಮ’ ಎಂದೂ ಕೂಡ ಹೆಸರಿದೆ. ಸದ್ಯಕ್ಕೆ ಇದು ದೇಶದಲ್ಲೇ ಅತಿ ಉತ್ತಮವಾದ ಪ್ರವಾಸ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನೀವು ಹೋಗಬೇಕಾ? ಎಲ್ಲಿದೆ ತಿಳಿಯಬೇಕಾ?
GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲೂ ಭಾರಿ ಇಳಿಕೆ
ಅದು ಇರುವುದು ಮೇಘಾಲಯದಲ್ಲಿ, ಗ್ರಾಮದ ಹೆಸರು ‘ಕೊಂಗ್‌ಥಾಂಗ್’. ವಿಶ್ವಸಂಸ್ಥೆಯು ಕೊಡಮಾಡುವ ಉತ್ತಮ ಪ್ರವಾಸ ಯೋಗ್ಯ ಗ್ರಾಮ ಎಂಬ ಪ್ರಶಸ್ತಿಗೆ ಈ ಗ್ರಾಮವನ್ನು ಕೇಂದ್ರ ಸರ್ಕಾರ ನಾಮನಿರ್ದೇಶನ ಕೂಡ ಮಾಡಿದೆಯಂತೆ.
ಈ ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಒಂದು ಹೆಸರು ಹಾಗೂ ಅದರ ಜತೆಗೆ ಒಂದು ಸ್ವರ ಸಂಯೋಜನೆಯ ’ಸಂಗೀತ ನಾಮ’ ಇದೆಯಂತೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಸಚಿವೆ ನಿರ್ಮಲಾ ಅವರಿಗೆ ಈ ಗ್ರಾಮವನ್ನು ಪರಿಚಯಿಸಿದ್ದು ಮೇಘಾಲಯ ಸಿಎಂ ಕಾನರಾಡ್ ಸಂಗ್ಮಾ ಅವರಂತೆ.
ವಿಶ್ವಸಂಸ್ಥೆಯ ಪ್ರಶಸ್ತಿಗೆ ಇನ್ನೂ ಎರಡು ಗ್ರಾಮಗಳನ್ನು ಶಿಫಾರಸು ಮಾಡಲಾಗಿದೆ. ತೆಲಂಗಾಣದ ಪೊಛಂಪಲ್ಲಿ ಮತ್ತು ಮಧ್ಯಪ್ರದೇಶದ ಲಾಧ್‌ಪುರ ಖಾಸ್.