ಶಿಲ್ಲಾಂಗ್: ದೇಶದ ಜನಮಾನಸದಲ್ಲಿ ಅನೇಕ ರಾಷ್ಟ್ರಭಕ್ತಿ ಗೀತೆಗಳು ಅಚ್ಚಳಿಯದೇ ಉಳಿದಿವೆ. ಆ ಪೈಕಿ ಟಾಪ್ ಗೀತೆಯಾಗಿರುವುದು “ಯೇ ಮೇರೆ ಪ್ಯಾರೆ ವತನ್ ” ಹಾಡು. ಸದ್ಯ ಈ ಹಾಡನ್ನು ತನ್ನ ಸಿರಿಕಂಠದಲ್ಲಿ ಹಾಡಿರುವ ಮೇಘಾಲಯದ 19 ವರ್ಷದ ಯುವತಿ ನೀನಿ ಅಲಿಯಾಸ್ ವೆನೆಶಿಯಾ ವಾರ್ಶೊಂಗ್ ಪೂರ್ಣ ಈಶಾನ್ಯ ರಾಜ್ಯಗಳಲ್ಲಿ ಮನೆ ಮಾತಾಗಿದ್ದಾಳೆ. ಇದು ಆಕೆಯ ಮೊದಲ ಹಿಂದಿ ಹಾಡು ಕೂಡ ಹೌದಂತೆ.
ಕೊರೊನಾ ಕಾಲಘಟ್ಟದಲ್ಲಿ ಮತ್ತು ಲಾಕ್‍ಡೌನ್ ಬವಣೆಯಲ್ಲಿ ಸಿಲುಕಿರುವ ಜನರಿಗಾಗಿ ಏನಾದರೂ ಪ್ರೇರಣದಾಯಕವಾದ ಹಾಡು ಕೊಡಬೇಕು ಎಂಬ ಆಲೋಚನೆಯು ನೀನಿಗೆ ಇತ್ತಂತೆ. ಅದು ಈಗ ಸಾಕಾರಗೊಂಡಿದೆ ಎನ್ನುತಾಳೆ ಆಕೆ. ನಮ್ಮ ದೇಶಕ್ಕೆ ಸದ್ಯ ಯೋಧರು ಹಾಗೂ ವೈದ್ಯರು ಆಧಾರ ಸ್ತಂಭಗಳಾಗಿದ್ದಾರೆ. ಅದನ್ನು ನನ್ನ ಸ್ನೇಹಿತರು ಮನದಟ್ಟು ಮಾಡಿಕೊಟ್ಟಾಗ, ತಂದೆಯವರು ಯೇ ಮೇರೆ ಪ್ಯಾರೆ ವತನ್ ಹಾಡನ್ನು ಆಯ್ಕೆ ಮಾಡಿಕೊಟ್ಟರು. 10 ವರ್ಷದಿಂದ ಸಂಗೀತ ಅಭ್ಯಾಸ ಮಾಡುತ್ತಿರುವೆ. ಹೆಚ್ಚಿನ ಕಲಿಕೆಗೆ ಹೋಗುವ ಗುರಿ ಇದೆ ಎಂದು ನೀನಿ ಹೇಳಿಕೊಂಡಿದ್ದಾಳೆ.
ಯೂಟ್ಯೂಬ್‍ನಲ್ಲಿ ಪ್ರತಿ ನಿಮಿಷ ಹೊಸಬರು ನೀನಿಯ ಹಾಡಿಗೆ ಮರಳಾಗುತ್ತಿದ್ದಾರೆ. ನೀನಿಯ ತಂದೆ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿಯು ವಿಕಲಾಂಗ ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. ಇವರಿಬ್ಬರೂ ಕೋವಿಡ್ ವಾರಿಯರ್ಸ್ ಎನ್ನುವುದು ವಿಶೇಷ.
https://youtu.be/3jLF-X0Oraw?t=148