ಭಿಕ್ಷುಕರು ಎಂಬ ಕಲ್ಪನೆಯಲ್ಲಿ ಅವರು ಆರ್ಥಿಕವಾಗಿ ಸ್ಥಿರವಾಗಿಲ್ಲದ, ಹಳೆಯ ಬಟ್ಟೆಗಳನ್ನು ಧರಿಸಿರುವ ಮತ್ತು ಕೊಳಕು ದೇಹದಲ್ಲಿರುತ್ತಾರೆ ಎಂದು ಹೇಳಲಾಗುತ್ತದೆ.
ಅದರ ಹೊರತಾಗಿ ಅವರು ಬಡವರು ಎಂದು ಭಾವಿಸಲಾಗುತ್ತದೆ. ಆದರೆ ಇತ್ತೀಚಿಗೆ ಭಿಕ್ಷೆ ಬೇಡುವವರು ಕೋಟ್ಯಧಿಪತಿಗಳಾಗಿರೋದನ್ನ ನೋಡಿ ನೀವು ಅಚ್ಚರಿಯಾಗಿದ್ದೀರಿ. ಭಿಕ್ಷೆ ಬೇಡಿದ ಹಣದಿಂದ್ಲೇ ಸಂಪತ್ತು ಗಳಿಸಿರುವವರು ನಮ್ಮ ನಡುವೆಯೇ ಇದ್ದಾರೆ. ಅವರೇ ವಿಶ್ವದ ಶ್ರೀಮಂತ ಭಿಕ್ಷುಕ ಭರತ್ ಜೈನ್.
ಮುಂಬೈನ ಹಲವು ಬೀದಿಗಳಲ್ಲಿ ಇವರು ಭಿಕ್ಷೆ ಬೇಡುತ್ತಾರೆ. ಬಡತನದಿಂದಾಗಿ ಔಪಚಾರಿಕ ಶಿಕ್ಷಣ ಪಡೆಯಲು ಸಾಧ್ಯವಾಗದ ಇವರು ಅತ್ಯಂತ ಶ್ರೀಮಂತರಾಗಿದ್ದಾರೆ. ಭರತ್ ಜೈನ್ ವಿವಾಹವಾಗಿದ್ದು ಪತ್ನಿ, ಇಬ್ಬರು ಪುತ್ರರು, ಓರ್ವ ಸಹೋದರ ಮತ್ತು ತಂದೆಯನ್ನು ಒಳಗೊಂಡಿರುವ ಕುಟುಂಬವನ್ನು ಹೊಂದಿದ್ದಾರೆ.
ಅವರ ಇಬ್ಬರು ಮಕ್ಕಳು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇವರ ಸಂಪಾದನೆ ಕೇಳಿದರೆ ನೀವು ನಿಜಕ್ಕೂ ಹೌಹಾರುತ್ತೀರ. ಅವರು ಮುಂಬೈ ಮೂಲದವರಾಗಿದ್ದು, ರೂ. 7.5 ಕೋಟಿ ($1 ಮಿಲಿಯನ್) ನಿವ್ವಳ ಮೌಲ್ಯ ಸಂಪತ್ತು ಹೊಂದಿದ್ದಾರೆ.
ಭಿಕ್ಷೆ ಬೇಡುವ ಮೂಲಕ ತಿಂಗಳಿಗೆ 60,000-75,000 ರೂ. ಗಳಿಸುತ್ತಾರೆ ಮತ್ತು ಮುಂಬೈನಲ್ಲಿ 1.2 ಕೋಟಿ ಮೌಲ್ಯದ ಎರಡು ಬೆಡ್‌ರೂಮ್ ಫ್ಲಾಟ್ ಹೊಂದಿದ್ದಾರೆ. ಥಾಣೆಯಲ್ಲಿ ತಿಂಗಳಿಗೆ 30,000 ರೂ. ಬಾಡಿಗೆ ಬರುವ ಎರಡು ಅಂಗಡಿಗಳನ್ನು ಹೊಂದಿದ್ದಾರೆ. ಇವರು ಛತ್ರಪತಿ ಶಿವಾಜಿ ಟರ್ಮಿನಸ್ ಅಥವಾ ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾರೆ ಎಂದು ವರದಿಯಾಗಿದೆ.
ಇಷ್ಟು ಶ್ರೀಮಂತರಾದ ನಂತರವೂ ಭರತ್ ಜೈನ್ ಮುಂಬೈನಲ್ಲಿ ಭಿಕ್ಷೆ ಬೇಡುವುದನ್ನು ನಿಲ್ಲಿಸಿಲ್ಲ. ಹೆಚ್ಚಿನ ಜನರು 12-14 ಗಂಟೆಗಳ ಕಾಲ ಕೆಲಸ ಮಾಡಿದರೂ ಅವರು ದಿನಕ್ಕೆ ಸಾವಿರ ರೂಪಾಯಿಗಳನ್ನು ಗಳಿಸಲು ವಿಫಲರಾಗುತ್ತಾರೆ. ಆದರೆ ಭರತ್ ಜೈನ್ ಜನರ ದಯೆಯಿಂದ ಪ್ರತಿದಿನ ಕಡಿಮೆ ಎಂದರೂ 2000-2500 ರೂ. ಸಂಗ್ರಹಿಸುತ್ತಾರೆ.
ಭರತ್ ಜೈನ್ ಮತ್ತು ಅವರ ಕುಟುಂಬವು ಪರೇಲ್‌ನಲ್ಲಿರುವ 1BHK ಡ್ಯುಪ್ಲೆಕ್ಸ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಕಾನ್ವೆಂಟ್ ಗೆ ಹೋಗುತ್ತಾರೆ. ಕುಟುಂಬದ ಇತರರು ಸ್ಟೇಷನರಿ ಅಂಗಡಿಯನ್ನು ಹೊಂದಿದ್ದಾರೆ. ಭಿಕ್ಷೆ ಬೇಡಬೇಡಿ ಎಂದು ಪದೇ ಪದೇ ಸಲಹೆ ನೀಡಿದರೂ ಭರತ್ ಕೇಳದೆ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.