alex Certify ವಿಶ್ವದ ಮೊದಲ ಹಾರುವ ಮೋಟಾರ್​ ಸೈಕಲ್​ ಸಂಚಾರಕ್ಕೆ ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಮೊದಲ ಹಾರುವ ಮೋಟಾರ್​ ಸೈಕಲ್​ ಸಂಚಾರಕ್ಕೆ ರೆಡಿ

ಭವಿಷ್ಯದ ಸಾರಿಗೆ ಕ್ಷೇತ್ರದಲ್ಲಿ ಹಾರುವ ಕಾರುಗಳು ಮತ್ತು ಹಾರುವ ಬೈಕುಗಳು ಬರುವ ನಿರೀಕ್ಷೆಯಿದೆ. ಜಪಾನಿನ ವಾಹನ ತಯಾರಕರು ಮುಂದಿನ ವರ್ಷದ ವೇಳೆಗೆ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಹೋವರ್ಬೈಕ್​ಗಳ ಸೇವೆ ಪ್ರಾರಂಭಿಸಲು ಯೋಜಿಸುತ್ತಿದ್ದಾರೆ.

ಹೊಸ ಹೋವರ್​ಬೈಕ್​ ಡೆಟ್ರಾಯಿಟ್​ ಆಟೋ ಶೋನಲ್ಲಿ ಪ್ರದರ್ಶನ ಕಂಡಿದ್ದು, ಇದು ಬೈಕ್​ನ ಸಾಮರ್ಥ್ಯವು ಕಾಲ್ಪನಿಕ ಮತ್ತು ವಾಸ್ತವತೆಯ ನಡುವಿನ ಗಡಿ ಮೀರಬಹುದು.

ಎವಿರ್ನ್ಸ್​ನಲ್ಲಿರುವ ಹೋವರ್​ ಬೈಕ್​ನ ತಯಾರಕರು ಎಕ್ಸ್​ಟುರಿಸ್ಮೊದ ಹುಟ್ಟು ಸಾರಿಗೆಯ ಭವಿಷ್ಯದ ಹೊಸ ಪ್ರಯಾಣದ ಆರಂಭವಾಗಿದೆ ಎಂದು ಹೇಳಿದ್ದಾರೆ.

ಇದು ಮುಂಭಾಗದಲ್ಲಿ ಎರಡು ದೊಡ್ಡ ಪ್ರೊಪೆಲ್ಲರ್​ಗಳನ್ನು (ರೆಕ್ಕೆ) ಹೊಂದಿದೆ ಮತ್ತು ಹಿಂಭಾಗದಲ್ಲಿ ನಾಲ್ಕು ಚಿಕ್ಕ ರೆಕ್ಕೆ ಬೆಂಬಲಿತವಾಗಿದೆ.

ಬ್ಯಾಟರಿಯ ಸಹಾಯದಿಂದ ಎಂಜಿನ್​ನಿಂದ ಚಾಲಿತವಾಗಿವೆ. ಪ್ರೊಪೆಲ್ಲರ್​ಗಳಿಂದ ತುಂಬಾ ಜೋರಾಗಿ ಶಬ್ದ ಬರುತ್ತದೆ, ಆದರೆ ಭವಿಷ್ಯದಲ್ಲಿ ಅದರ ಡೆಸಿಬಲ್​ಗಳನ್ನು ಕಡಿಮೆ ಮಾಡಲು ಕಂಪನಿ ಆಶಿಸುತ್ತಿದೆ.

3.7 ಮೀಟರ್​ (146 ಇಂಚು) ಉದ್ದ, 2.4 ಮೀಟರ್​ (94.5 ಇಂಚು) ಅಗಲ ಮತ್ತು 1.5 ಮೀಟರ್​ (59 ಇಂಚು) ಎತ್ತರವಿದೆ. ಇದು ಗಾಳಿಯಲ್ಲಿ 30 ರಿಂದ 40 ನಿಮಿಷಗಳವರೆಗೆ ಗರಿಷ್ಠ 60 ಎಂಪಿಎಚ್​ (97 ಕೆಪಿಎಚ್​) ವೇಗದಲ್ಲಿ ಚಲಿಸಬಹುದು. ಹೋವರ್​ ಬೈಕ್​ 300 ಕೆಜಿ (661 ಪೌಂಡ್​ಗಳು) ತೂಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...