ಪುಣೆ: ಸಾಂಕ್ರಾಮಿಕ ರೋಗ ಕೋವಿಡ್-19 ಲಾಕ್ ಡೌನ್ ನಿಂದಾಗಿ ಕೆಲವರು ಒಂಟಿತನ ಅನುಭವಿಸಿದರೆ ಇನ್ನೂ ಕೆಲವರು ಉತ್ತಮ ಹವ್ಯಾಸಗಳನ್ನು ರೂಪಿಸಿಕೊಂಡಿದ್ದಾರೆ. ಹಾಗೆಯೇ ಪುಣೆಯಲ್ಲಿ ಯುವತಿಯೊಬ್ಬಳು ಹತ್ತಕ್ಕೂ ಹೆಚ್ಚು ಗಿಳಿಗಳೊಂದಿಗೆ ಸ್ನೇಹ ಬೆಳೆಸಿ ಸುದ್ದಿಯಾಗಿದ್ದಾಳೆ.
ಇದು ಪಕ್ಷಿಗಳು ಹಾಗೂ ಮಾನವನ ನಡುವಿನ ಸುಂದರ ಸ್ನೇಹಕ್ಕೆ ಒಂದು ಉದಾಹರಣೆಯಾಗಿದೆ. ಮನೆಯತ್ತ ಬಂದ ಗಿಳಿಗಳಿಗೆ ತಿನ್ನಲು ಆಹಾರ, ನೀರು ನೀಡಿ ಯುವತಿ ರಾಧಿಕಾ ಸತ್ಕರಿಸಿದ್ದರಿಂದ ಪ್ರತಿದಿನ ಇವರ ಮನೆಗೆ ಬರುವ ಹತ್ತಾರು ಗಿಳಿಗಳು ಯಾವುದೇ ಅಳುಕಿಲ್ಲದೆ ತನ್ನ ಆಹಾರವನ್ನು ತಿನ್ನುತ್ತವೆ. ಹಾಗೆಯೇ ಈಕೆ ಈ ಪಕ್ಷಿಗಳನ್ನು ಮುಟ್ಟಿದರೂ ಕೂಡ ಹಾರಿ ಹೋಗದೆ ಆರಾಮದಾಯಕವಾಗಿಯೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.
ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಚರಂಡಿಯಲ್ಲಿ ಅಡಗಿ ಕುಳಿತು ವಿಮಾನದ ನಿರೀಕ್ಷೆಯಲ್ಲಿದ್ದಾರೆ ಜನ
“ಮೊದಲಿಗೆ ಭಾರತೀಯ ರಿಂಗ್ ನೆಕ್ ಪ್ಯಾರಕೀಟ್ ಬರುತ್ತಿತ್ತು. ಆದರೆ, ನಂತರ ಅಲೆಕ್ಸಾಂಡ್ರಿನ್ ಪ್ಯಾರಕೀಟ್ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿತು. ಇವುಗಳು ಪ್ರತಿದಿನ ಇಲ್ಲಿಗೆ ಬರುತ್ತವೆ. ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ” ಎಂದು ರಾಧಿಕಾ ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
https://twitter.com/ANI/status/1430270813471592448?ref_src=twsrc%5Etfw%7Ctwcamp%5Etweetembed%7Ctwterm%5E1430270813471592448%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-meet-pune-girl-who-befriended-cared-for-over-dozen-parrots-covid-lockdown-pics-video-watch-4911632%2F