ಕೋವಿಡ್ 19ನಿಂದಾಗಿ ಅನೇಕರ ಜೀವನವೇ ಸಂಪೂರ್ಣ ಬದಲಾಗಿ ಹೋಗಿದೆ. ಈ ಹಿಂದೆಂದೂ ಬಳಕೆ ಮಾಡಿರದ ಮಾಸ್ಕ್ಗಳು ಹಾಗೂ ಪಿಪಿಇ ಕಿಟ್ಗಳು ಇದೀಗ ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಇದರ ಜೊತೆಯಲ್ಲಿ ವೈದ್ಯಕೀಯ ತ್ಯಾಜ್ಯಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
27 ವರ್ಷದ ಪರಿಸರ ಪ್ರೇಮಿ ಈ ವೈದ್ಯಕೀಯ ತ್ಯಾಜ್ಯಗಳನ್ನ ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬಹುದು ಅನ್ನೋದಕ್ಕೆ ಮಾರ್ಗ ಕಂಡುಹಿಡಿದಿದ್ದಾರೆ. ರಿಸೈಕಲ್ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಡಾ. ವಿನೀಶ್ ದೇಸಾಯಿ ಈ ಬಯೋಕೆಮಿಕಲ್ ತ್ಯಾಜ್ಯಗಳನ್ನ ಬಳಕೆ ಮಾಡಿ ಪರಿಸರ ಸ್ನೇಹಿ ಇಟ್ಟಿಗೆಗಳನ್ನ ಕಂಡುಹಿಡಿದಿದ್ದಾರೆ.
BSY ಸಮರ್ಥ ನಾಯಕ, ಧೈರ್ಯದಿಂದ ನಿರ್ಧಾರ ಕೈಗೊಳ್ಳುವವರು ಸಿಎಂ ಆಗಲಿ: ಬಿಜೆಪಿ ಶಾಸಕ ರಘುಪತಿ ಭಟ್
ನಾನು 11 ವರ್ಷ ಪ್ರಾಯದವನಾಗಿದ್ದಾಗ ಅಗಿಯುತ್ತಿದ್ದ ಚಿವಿಂಗ್ ಗಮ್ನ್ನು ತೆಗೆದು ಪೇಪರಿನಲ್ಲಿ ಸುತ್ತಿ ಕಿಸೆಯಲ್ಲಿ ಇಟ್ಟುಕೊಂಡಿದ್ದೆ. ಆದರೆ ಅದನ್ನು ಎಸೆಯಲು ನಾನು ಮರೆತಿದ್ದೆ. ಕೆಲವು ದಿನಗಳ ಬಳಿಕ ಚಿವಿಂಗ್ ಗಮ್ನ್ನು ನಾನು ತೆಗೆದು ನೋಡಿದಾಗ ಅದು ಇಟ್ಟಿಗೆಯಷ್ಟು ಗಟ್ಟಿಯಾಗಿತ್ತು. ಇದರಿಂದ ನನಗೆ ಇಟ್ಟಿಗೆ ಮಾಡುವ ಪ್ಲಾನ್ ಹೊಳೆಯಿತು. ಹೀಗಾಗಿ ನಾನು 16 ವಯಸ್ಸು ಪ್ರಾಯದವನಾಗಿದ್ದಾಗಲೇ ಪರಿಸರ ಸ್ನೇಹಿ ಇಟ್ಟಿಗೆ ನಿರ್ಮಾಣ ಮಾಡಿದ್ದೆ ಎಂದು ವಿನೀಶ್ ದೇಸಾಯಿ ಹೇಳಿದ್ದಾರೆ.
ಇದೀಗ ವೈದ್ಯಕೀಯ ತ್ಯಾಜ್ಯಗಳನ್ನ ಬಳಕೆ ಮಾಡಿ ಮತ್ತೊಂದು ಮಾದರಿಯ ಪರಿಸರ ಸ್ನೇಹಿ ಇಟ್ಟಿಗೆಯನ್ನ ವಿನೀಶ್ ಕಂಡುಹಿಡಿದಿದ್ದಾರೆ. ಈ ಇಟ್ಟಿಗೆಗಳು ಸಾಮಾನ್ಯ ಇಟ್ಟಿಗೆಗಿಂತ ಹೆಚ್ಚು ಬಲಶಾಲಿಯಾಗಿದೆ.