ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು, ಸ್ಟಾರ್ ಸೆಲೆವ್ರಿಟಿಗಳು, ಉದ್ಯಮಿಗಳು ತಮ್ಮದೇ ಆದ ಖಾಸಗಿ ವಿಮಾನವನ್ನುಹೊಂದಿದ್ದಾರೆ ಎಂಬುದರ ಬಗ್ಗೆ ಕೇಳಿರುತ್ತೀರಿ. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಬಿಲ್ಗೇಟ್ಸ್, ಎಲಾನ್ ಮಸ್ಕ್ನಂತಹ ಸಾಕಷ್ಟು ಕೋಟ್ಯಾಧಿಪತಿಗಳು ಖಾಸಗಿ ಜೆಟ್ ಹೊಂದಿದ್ದಾರೆ. ಆದರೆ ಇವರ್ಯಾರ ಬಳಿಯೂ ಇರದ ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಹೊಂದಿರುವ ವ್ಯಕ್ತಿ ಯಾರು ಗೊತ್ತೇ..?
ಅತ್ಯಂತ ದುಬಾರಿ ಖಾಸಗಿ ಜೆಟ್ ಅನ್ನು ರಷ್ಯಾದ ಉದ್ಯಮಿ ಅಲಿಶರ್ ಬುರ್ಖಾನೋವಿಚ್ ಉಸ್ಮಾನೋವ್ ಎಂಬವರು ಹೊಂದಿದ್ದಾರೆ. ಇದರ ಬೆಲೆ ಅಂದಾಜು 19.5 ಬಿಲಿಯನ್ ಡಾಲರ್ ಆಗಿದೆ. ಅಲಿಶರ್ ಉಸ್ಮಾನೋವ್ ಅವರು ಐಷಾರಾಮಿ ಏರ್‌ಬಸ್ A340-300 ಅನ್ನು ಹೊಂದಿದ್ದಾರೆ. ವಿಮಾನವು ಕಾರ್ಖಾನೆಯಿಂದ 250 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ, ಆದರೆ ಅಲಿಶರ್ ಉಮನೋವ್ ಕಸ್ಟಮ್ ಖಾಸಗಿ ಜೆಟ್ ಇದಾಗಿದ್ದು, ಬರೋಬ್ಬರಿ 400 ಮಿಲಿಯನ್ ಡಾಲರ್ ಅಂದರೆ ರೂ.3,286 ಕೋಟಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಇದು ಯುರೋಪ್ ಖಂಡದ ಅತಿ ದೊಡ್ಡ ಖಾಸಗಿ ಜೆಟ್ ಆಗಿದೆ.
ಅಲಿಶರ್ ಉಸ್ಮಾನೋವ್ ರಷ್ಯಾದ ಕೈಗಾರಿಕಾ ಸಂಘಟಿತವಾದ ಮೆಟಾಲೊಯಿನ್‌ವೆಸ್ಟ್‌ನ ಬಹುಪಾಲು ಷೇರುದಾರರಾಗಿದ್ದಾರೆ ಮತ್ತು ಕೊಮ್ಮರ್ಸೆಂಟ್ ಪಬ್ಲಿಷಿಂಗ್ ಹೌಸ್ ಅನ್ನು ಹೊಂದಿದ್ದಾರೆ. ಅಲಿಶರ್ ರಷ್ಯಾದ ಎರಡನೇ ಅತಿದೊಡ್ಡ ಮೊಬೈಲ್ ಟೆಲಿಫೋನ್ ಆಪರೇಟರ್ ಮೆಗಾಫೋನ್‌ನ ಸಹ-ಮಾಲೀಕರಾಗಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ತಾಮ್ರದ ನಿಕ್ಷೇಪಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸುವ ಉಡೋಕನ್ ತಾಮ್ರದ ಮಾಲೀಕರಾಗಿದ್ದಾರೆ.