ಯಾವುದೇ ವ್ಯವಹಾರವನ್ನು ಹೊಂದದೆ ಅಥವಾ ಸ್ಥಾಪಿಸದೆ ಬಿಲಿಯನೇರ್‌ಗಳಾದ ಕೆಲವೇ ವ್ಯಕ್ತಿಗಳಲ್ಲಿ ಇಗ್ನೇಷಿಯಸ್ ನವಿಲ್ ನೊರೊನ್ಹಾ ಅವರು ಒಬ್ಬರು.
ಭಾರತದಲ್ಲಿನ ಅತ್ಯಂತ ಶ್ರೀಮಂತ ಮ್ಯಾನೇಜರ್ ಮತ್ತು ವೃತ್ತಿಪರ ಸಿಇಒ ಆಗಿರುವ ನೊರೊನ್ಹಾ ಅವರು ಇತ್ತೀಚಿನ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ, ಕಳೆದ ವರ್ಷದಲ್ಲಿ ಅವರ ಸಂಪತ್ತು 12 ಪ್ರತಿಶತದಷ್ಟು ಬೆಳೆದಿದೆ. ವ್ಯಾಪಾರ ಮಾಲೀಕರಲ್ಲದಿದ್ದರೂ, ಅವರು ಹಲವಾರು ಉದ್ಯಮಿಗಳಿಗಿಂತ ಶ್ರೀಮಂತರಾಗಿದ್ದು, ಅಂದಾಜು ನಿವ್ವಳ ಮೌಲ್ಯ 6,500 ಕೋಟಿ ರೂ. ಆಗಿದೆ.
ನೊರೊನ್ಹಾ ಅವರು ಅವೆನ್ಯೂ ಸೂಪರ್‌ಮಾರ್ಟ್ಸ್‌ನ ದೀರ್ಘಾವಧಿಯ ಸಿಇಒ ಆಗಿದ್ದಾರೆ. ಇದು ನವೀನ ಸೂಪರ್‌ಮಾರ್ಕೆಟ್ ಸರಪಳಿ ಡಿಮಾರ್ಟ್‌ನ ಹಿಂದಿನ ಕಂಪನಿಯಾಗಿದೆ. ನೊರೊನ್ಹಾ ನಡೆಸುತ್ತಿರುವ ಸಂಸ್ಥೆಯು 2,36,800 ಕೋಟಿ ರೂ.ಗೆ ವಹಿವಾಟು ಏರಿದ್ದು, ಇವರ ಕಾರ್ಯತಂತ್ರದಿಂದ ಡಿಮಾರ್ಟ್ ಭಾರತದಲ್ಲಿ ರಾಜನಂತೆ ಮೆರೆಯುತ್ತಿದೆ.
ಎಫ್‌ಎಂಸಿಜಿ ವಲಯದಲ್ಲಿ ಗುಣಮಟ್ಟವನ್ನು ಹೆಚ್ಚಿಸುವುದು ಸೇರಿದಂತೆ ಹಲವಾರು ಉದ್ಯಮದ ಪ್ರಥಮಗಳಿಗೆ ನೊರೊನ್ಹಾ ಅವರ ಹೆಸರಿದೆ. ದೂರದೃಷ್ಟಿಯುಳ್ಳ ಮತ್ತು ಕಾರ್ಯತಂತ್ರದ ಮೇಧಾವಿಯಾಗಿರುವ ಅವರು ಉನ್ನತ ಸಿಇಒ ಎಂದು ಪ್ರಸಿದ್ಧರಾಗಿದ್ದಾರೆ.
ನೊರೊನ್ಹಾ ಅವರು ಇತ್ತೀಚೆಗೆ 70 ಕೋಟಿ ರೂಪಾಯಿಗೆ ಮುಂಬೈನಲ್ಲಿ ಅದ್ಧೂರಿ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ಬಾಂದ್ರಾ (ಪೂರ್ವ) ದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ 10 ವಾಹನ ಗ್ಯಾರೇಜ್ ಅನ್ನು ಹೊಂದಿದೆಯಂತೆ. ಪಟ್ಟಿ ಮಾಡಲಾದ ಸಂಸ್ಥೆಯಲ್ಲಿ ಅವರ ಮಹತ್ವದ ಪಾಲನ್ನು ಹೊರತುಪಡಿಸಿ, ನೊರೊನ್ಹಾ ಅವರು ಕಳೆದ ವರ್ಷ 4.5 ಕೋಟಿ ರೂ. ವೇತನ ಪಡೆದಿದ್ದಾರೆ ಎನ್ನಲಾಗಿದೆ.