ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅಮೆರಿಕ ಸರ್ಕಾರದ ಅನೇಕ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಇವರ ನಡುವೆ ಭಾರತೀಯ-ಅಮೆರಿಕನ್ ಮೂಲದ ಸುಮೋನಾ ಗುಹಾ, ದಕ್ಷಿಣ ಏಷ್ಯಾ ವ್ಯವಹಾರಗಳಲ್ಲಿ ಅಮೆರಿಕ ಅಧ್ಯಕ್ಷರ ವಿಶೇಷ ಸಲಹೆಗಾರ್ತಿ, ಭಾರತೀಯ ಮಾಧ್ಯಮಗಳಿಗೆ ಎದ್ದು ಕಂಡಿದ್ದಾರೆ.
ಪ್ರಧಾನಿ ಮೋದಿ ಭೇಟಿ ಮಾಡಿದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ನಿಯೋಗದ ಮುಖ್ಯ ಸದಸ್ಯೆಯಾಗಿಯೂ ಸುಮೋನಾ ಇದ್ದರು. ಬಿಡೆನ್-ಹ್ಯಾರಿಸ್ ಅಭಿಯಾನದದ ವೇಳೆ ದಕ್ಷಿಣ ಏಷ್ಯಾ ವಿದೇಶಾಂಗ ನೀತಿ ರಚನೆ ತಂಡದ ಭಾಗವಾಗಿ ಗುಹಾ ಕೆಲಸ ಮಾಡಿದ್ದಾರೆ.
2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ; ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರೆಸಿದ HDK
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ವಿಶೇಷ ಪ್ರತಿನಿಧಿಯ ಕಚೇರಿಯಲ್ಲಿ ಹಿರಿಯ ಸಲಹೆಗಾರ್ತಿಯಾಗಿ ಕೆಲಸ ಮಾಡಿರುವ ಗುಹಾ, ಉಪಾಧ್ಯಕ್ಷರ ಕಚೇರಿಯಲ್ಲಿ ರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಶೇಷ ಸಲಹೆಗಾರ್ತಿಯಾಗಿಯೂ ಅನುಭವ ಹೊಂದಿದ್ದಾರೆ.
ಜಾರ್ಜ್ಟೌನ್ ಮತ್ತು ಜಾನ್ಸ್ ಹಾಪ್ಸಿನ್ಸ್ ವಿವಿಯಲ್ಲಿ ಪದವಿಗಳನ್ನು ಪೂರೈಸಿರುವ ಗುಹಾ, 1996ರಲ್ಲಿ ತಮ್ಮ ವೃತ್ತಿಯನ್ನು ಅರ್ಥ ತಜ್ಞೆಯಾಗಿ ಆರಂಭಿಸಿದ್ದು, ಆಲ್ಬ್ರೈಟ್ ಸ್ಟೋನ್ಬ್ರಿಡ್ಜ್ ಸಮೂಹದಲ್ಲಿ ಹಿರಿಯ ಉಪಾಧ್ಯಕ್ಷೆಯಾಗಿದ್ದಾರೆ ಎಂದು ಲಿಂಕ್ಡಿನ್ನಲ್ಲಿರುವ ಅವರ ಪ್ರೊಫೈಲ್ನಿಂದ ತಿಳಿದುಬಂದಿದೆ.