ಉತ್ತರ ಘಾನಾದ 29 ವರ್ಷದ ಸುಲೇಮಾನಾ ಅಬ್ದುಲ್ ಸಮೇದ್ 7 ಅಡಿ 4 ಇಂಚು ಎತ್ತರ ಹೊಂದುವ ಮೂಲಕ ಎರಡನೆಯ ಅತಿ ಎತ್ತರದ ವ್ಯಕ್ತಿ ಎಂದು ಘೋಷಿಸ್ಪಟ್ಟಿದ್ದಾನೆ. ಈತ ಟರ್ಕಿಯಲ್ಲಿ ವಾಸಿಸುವ ಮತ್ತು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಜೀವಂತವಾಗಿರುವ ಅತ್ಯಂತ ಎತ್ತರದ ವ್ಯಕ್ತಿ ಎಂಬ ಬಿರುದನ್ನು ಹೊಂದಿರುವ ಸುಲ್ತಾನ್ ಕೊಸೆನ್‌ಗಿಂತ ಕೇವಲ 1 ಅಡಿ ಕುಳ್ಳಗಿದ್ದಾನೆ.
ಅಸಲಿಗೆ, ಸುಲೇಮಾನ್ ಎತ್ತರ 9 ಅಡಿ 6 ಇಂಚು (2.89 ಮೀ) ಎನ್ನಲಾಗಿತ್ತು. ಆದರೆ ಗ್ರಾಮೀಣ ಚಿಕಿತ್ಸಾಲಯದಲ್ಲಿ ಸರಿಯಾದ ಅಳತೆ ಸಾಧನಗಳಿಲ್ಲ ಎಂದು ನಂತರ ಕಂಡುಹಿಡಿಯಲಾಯಿತು. ಈಗ ಸರಿಯಾಗಿ ಲೆಕ್ಕ ಮಾಡಿದಾಗ ಒಂದು ಅಡಿಯಿಂದ ಗಿನ್ನೆಸ್ ದಾಖಲೆ ವಂಚಿತನಾಗಿದ್ದಾನೆ ಈತ.
ಈತನ ಎತ್ತರವನ್ನು ಅಳೆಯಲು 16 ಅಡಿ ಅಳತೆಯ ಟೇಪ್ ಅನ್ನು ಬಳಸಲಾಗಿತ್ತು. ಅಂದಹಾಗೆ ಸುಲೇಮಾನ್ ಇನ್ನೂ ಬೆಳೆಯುತ್ತಲೇ ಇದ್ದಾನೆ. ಆದ್ದರಿಂದ ಮುಂದೊಂದು ದಿನ ತಾನು ಗಿನ್ನೆಸ್ ದಾಖಲೆ ಸೇರಬಹುದು ಎನ್ನುವ ಆಸೆಯನ್ನು ಈತ ಹೊತ್ತಿದ್ದಾನೆ.
“ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಾನು ಬೆಳೆಯುತ್ತಿದ್ದೇನೆ. ಇನ್ನು ನಾಲ್ಕು ತಿಂಗಳು ಬಿಟ್ಟು ನೋಡಿದರೆ ಇನ್ನೂ ಬೆಳೆಯುತ್ತೇನೆ, ಶೀಘ್ರದಲ್ಲಿ ದಾಖಲೆ ಸೃಷ್ಟಿಸುತ್ತೇನೆ” ಎಂದಿದ್ದಾನೆ ಸುಲೇಮಾನ್.