alex Certify ಒಂದು ಕಾಲದಲ್ಲಿ ಧೋನಿ, ರೋಹಿತ್ ಜೊತೆ ಕ್ರಿಕೆಟ್ ಆಡಿದ್ದವರೀಗ ಸೆಲಬ್ರಿಟಿ ಸಿಂಗರ್; ಯಾರು ಗೊತ್ತಾ ಆ ಗಾಯಕ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕಾಲದಲ್ಲಿ ಧೋನಿ, ರೋಹಿತ್ ಜೊತೆ ಕ್ರಿಕೆಟ್ ಆಡಿದ್ದವರೀಗ ಸೆಲಬ್ರಿಟಿ ಸಿಂಗರ್; ಯಾರು ಗೊತ್ತಾ ಆ ಗಾಯಕ….?

ಕ್ರಿಕೆಟ್ ನಲ್ಲಿ ಹೆಸರು ಮಾಡಿದವರು ನಿವೃತ್ತಿ ನಂತರ ಸಿನಿಮಾ ರಂಗ ಪ್ರವೇಶಿಸುತ್ತಾರೆ. ಉದಾಹರಣೆಗೆ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸಲೀಲ್ ಅಂಕೋಲಾ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದೊಡ್ಡವರು ಸೇರಿದಂತೆ ಆಟದಿಂದ ನಿವೃತ್ತರಾದ ನಂತರ ನಟರಾದ ಅನೇಕ ಕ್ರಿಕೆಟಿಗರು ಭಾರತದಲ್ಲಿದ್ದಾರೆ.

ಆದರೆ ನಾವು ನಿಮಗೆ ಪರಿಚಯ ಮಾಡಿಸುತ್ತಿರುವುದು ಕ್ರಿಕೆಟ್ ನಿಂದ ಹೊರಬಂದ ಬಳಿಕ ಗಾಯಕನಾಗಿ ಹೆಸರು ಮಾಡಿದ ಆ ಸೆಲಬ್ರಿಟಿಯ ಬಗ್ಗೆ.
ನಾವು ಹೇಳುತ್ತಿರುವ ಸೆಲೆಬ್ರಿಟಿ ಬೇರೆ ಯಾರೂ ಅಲ್ಲ, ಹಾರ್ಡಿ ಸಂಧು ಎಂದು ಕರೆಯಲ್ಪಡುವ ಹರ್ದ್ವಿಂದರ್ ಸಿಂಗ್ ಸಂಧು. ಗಮನಾರ್ಹವಾಗಿ ಹಾರ್ಡಿ ಸಂಧು ಓರ್ವ ಯಶಸ್ವಿ ಗಾಯಕ ಮಾತ್ರವಲ್ಲದೆ ನಟ ಮತ್ತು ಮಾಜಿ ಕ್ರಿಕೆಟಿಗ ಕೂಡ. ಅವರು ಶಿಖರ್ ಧವನ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಹಲವಾರು ದೊಡ್ಡ ಆಟಗಾರರೊಂದಿಗೆ ಕ್ರಿಕೆಟ್ ಆಡಿದ್ದಾರೆ.

ಹಾರ್ಡಿ ಸಂಧು ಪಂಜಾಬಿ ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಮೊದಲ ಹಾಡು ಟಕಿಲಾ ಶಾಟ್ ಸೂಪರ್‌ಹಿಟ್ ಆಗಿತ್ತು. ಸಂಧು ಸೋಚ್ (2013) ಮತ್ತು ಜೋಕರ್ (2014) ಆಲ್ಬಂನಲ್ಲಿ ಜನಪ್ರಿಯರಾದರು.

ಸಂಧು 2014 ರಲ್ಲಿ ಯಾರನ್ ದ ಕೆಚಪ್ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅವರ ಹಾಡು ‘ಸೋಚ್’ ಆಲ್ಬಂ ಸಾಂಗ್ ಗಳನ್ನು 2016 ರ ಬಾಲಿವುಡ್ ಚಲನಚಿತ್ರ ಏರ್‌ಲಿಫ್ಟ್ ಗಾಗಿ ರೀಮೇಕ್ ಮಾಡಲಾಗಿದೆ.

ಬಿಜಿಲಿ ಬಿಜಿಲಿ ಹಾಡಿನ ಮೂಲಕ ಸಂಧು ಸಾಕಷ್ಟು ಜನಪ್ರಿಯತೆ ಗಳಿಸಿದರು. ಈ ಹಾಡಿನಲ್ಲಿ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್ ತಿವಾರಿ ಕೂಡ ಕಾಣಿಸಿಕೊಂಡಿದ್ದಾರೆ. ಹಾರ್ಡಿ ಸಂಧು 2021 ರಲ್ಲಿ ಕಬೀರ್ ಖಾನ್ ಅವರ ’83’ ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.

ಗಾಯಕನಾಗುವ ಮೊದಲು, ಹಾರ್ಡಿ ಸಂಧು ಅದ್ಭುತ ಕ್ರಿಕೆಟಿಗರಾಗಿದ್ದರು. ಅವರು ವೇಗದ ಬೌಲರ್ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಆಡಿದರು, ಆದರೆ ಅವರು 2007 ರಲ್ಲಿ ಗಂಭೀರವಾದ ಮೊಣಕೈ ಗಾಯದಿಂದಾಗಿ ಕ್ರಿಕೆಟ್ ಆಡುವುದನ್ನು ತೊರೆದರು.

ರಾಜ್ ಸಾಮಾನಿ ಅವರೊಂದಿಗೆ ಮಾತನಾಡುತ್ತಾ, ಹಾರ್ಡಿ ಸಂಧಿ ಅವರು ರಣಜಿ ಟ್ರೋಫಿಯಲ್ಲೂ ಆಡಿದ್ದಾರೆ ಎಂದು ಒಮ್ಮೆ ಹೇಳಿದ್ದರು. ಟಾಕ್ ಶೋ ವೇಳೆ ಸಂಧು ಅವರು ಒಮ್ಮೆ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಬೌಲಿಂಗ್ ಮಾಡಿದ್ದನ್ನು ಬಹಿರಂಗಪಡಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...