ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ವಿಸ್ತಾರವಾದ 1,112 ಎಕರೆ ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ದೇಶದಲ್ಲಿ ಮೊದಲ ‘ಬಯೋ, ಜಿಯೋ ಮತ್ತು ಹೈಡ್ರೋ ಪಾರ್ಕ್’ ಅಭಿವೃದ್ಧಿ ಪಡಿಸಲಾಗಿದೆ.
ಬಯೋ ಪಾರ್ಕ್‌ಗಾಗಿ ಕರ್ನಾಟಕ ಸರ್ಕಾರದಿಂದ ಗೊತ್ತುಪಡಿಸಿದ ವಿಶೇಷ ಅಧಿಕಾರಿ ಪ್ರೊ. ಟಿ.ಜೆ. ರೇಣುಕಾ ಪ್ರಸಾದ್ ಅವರ ಶ್ರಮದ ಫಲವಿದು.
ಇವರ ಸತತ ಪರಿಶ್ರಮದಿಂದಾಗಿ ಪಾಳು ಭೂಮಿಯಲ್ಲೀಗ ಹಸಿರು ಚಿಗುರಿದೆ. ಖಾಲಿ ಬಿದ್ದ ಭೂಪ್ರದೇಶವನ್ನು ಅವರು ಕಿರು ಅರಣ್ಯವನ್ನಾಗಿ ಮಾಡಿದ್ದಾರೆ.
ಜೈವಿಕ ವೈವಿಧ್ಯತೆಯು ಜೀವನದ ಏಕೈಕ ಮಾರ್ಗವಾಗಿದೆ ಮತ್ತು ಅದನ್ನು ಕಾರ್ಯಗತಗೊಳಿಸಬೇಕಾದಾಗ ಅದರಲ್ಲಿಯೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ರೀತಿ ಮಾಡುವಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಆದರೂ ಎಲ್ಲಾ ಸವಾಲುಗಳನ್ನು ಹಿಮ್ಮೆಟ್ಟಿ ಇಂಥದ್ದೊಂದು ಸಾಧನೆ ಮಾಡಿದ್ದಾರೆ ರೇಣುಕಾ ಪ್ರಸಾದ್.
“ಸಾರ್ವಜನಿಕರು, ವನ್ಯಜೀವಿ ಉತ್ಸಾಹಿಗಳ ಭಾಗವಹಿಸುವಿಕೆಯಿಂದ ಇದು ಸಾಧ್ಯವಾಯಿತು. ಹಲವಾರು ರೀತಿಯ ಸವಾಲುಗಳನ್ನು ಎದುರಿಸಲು ನೆರವಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲದ ಸತತ ಪ್ರಯತ್ನದಿಂದ ಅರಣ್ಯ ಪ್ರದೇಶವನ್ನಾಗಿಸಲಾಗಿದೆ“ ಎಂದು ಅವರು ಹೇಳಿದರು. ಇಲ್ಲಿ ನಾನಾ ತಳಿಗಳ ಅಪರೂಪದ ಗಿಡಗಳನ್ನೂ ಕಾಣಬಹುದಾಗಿದೆ.