ಸಾರ್ವಜನಿಕವಾಗಿ ಷೇರುಗಳ ಹಂಚಿಕೆಗೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ತನ್ನ ಷೇರುಗಳ ಮೌಲ್ಯದಲ್ಲಿ ಐದು ಪಟ್ಟು ಏರಿಕೆ ಕಂಡುಕೊಂಡಿರುವ ಡಿಮಾರ್ಟ್ ರೀಟೇಲ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ಹೂಡಿಕೆದಾರರನ್ನು ಸಿರಿವಂತರನ್ನಾಗಿ ಮಾಡಿದ್ದರು
ಇಷ್ಟೇ ಅಲ್ಲದೇ ಇದರಿಂದ ಮುಖ್ಯ ಕಾರ್ಯನಿರ್ವಾಹಕ ಇಗ್ನೇಶಿಯಸ್ ನವಿಲ್ ನೊರೋನಾರ ಒಟ್ಟಾರೆ ಆಸ್ತಿ 5,146 ಕೋಟಿ ರೂ.ಗಳಿಗೆ ಏರಿದ್ದು, ಅವರೀಗ ದೇಶದ ಅತ್ಯಂತ ಶ್ರೀಮಂತ ವೃತ್ತಿಪರ ಸಿಇಒ ಆಗಿದ್ದಾರೆ.
ದೇಶದ ಎರಡನೇ ಅತಿ ದೊಡ್ಡ ವ್ಯವಸ್ಥಿತ ರೀಟೇಲರ್ ಆಗಿರುವ ಡಿಮಾರ್ಟ್‌ನ ಸ್ಥಾಪಕ ರಾಧಾಕೃಷ್ಣನ್ ಒಂದು ಹಂತದಲ್ಲಿ ಮುಖೇಶ್ ಅಂಬಾನಿ ಬಿಟ್ಟರೆ ದೇಶದ ಅತ್ಯಂತ ಸಿರಿವಂತ ವ್ಯಕ್ತಿಯೂ ಆಗಿದ್ದು, ಅವರೀಗ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮುಂಬೈನ ಎಸ್‌ಐಇಎಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪೂರೈಸಿದ ಇಗ್ನೇಶಿಯಸ್ ನವಿಲ್, ನಗರದ ನರ್ಸಿ ಮೋನ್‌ಜೀ ಮ್ಯಾನೇಜ್‌ಮೆಂಟ್ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.
‘ದಿಲ್‍ಖುಷ್ʼ ದೋಸೆ ಮಾಡುವ ಈ ವಿಡಿಯೊ ಫುಲ್ ವೈರಲ್
ಡಿಮಾರ್ಟ್‌ಗೆ ಕಾಲಿಡುವ ಮುನ್ನ ಹಿಂದೂಸ್ತಾನ್ ಯೂನಿಲಿವರ್‌ನಲ್ಲಿ ಕೆಲಸ ಮಾಡಿದ್ದ ನವಿಲ್, ಅಲ್ಲಿ ಸೇಲ್ಸ್, ಮಾರುಕಟ್ಟೆ ಅಧ್ಯಯನ ಹಾಗೂ ಆಧುನಿಕ ವಹಿವಾಟುಗಳ ಬಗ್ಗೆ ವಾಸ್ತವಿಕ ಅರಿವು ಹೆಚ್ಚಿಸಿಕೊಂಡಿದ್ದರು. ಇನ್ನೂ 30ರ ವಯಸ್ಸು ಮುಟ್ಟುವ ಮುನ್ನವೇ ನವಿಲ್‌ರ ಸಾಮರ್ಥ್ಯ ಗ್ರಹಿಸಿದ್ದ ದಮಾನಿ, ತಮ್ಮ ಹೊಸ ಉದ್ಯಮಕ್ಕೆ ಉಸ್ತುವಾರಿನ್ನಾಗಿ ನೇಮಕ ಮಾಡಿಕೊಂಡರು.
2004ರಿಂದ ಡಿಮಾರ್ಟ್‌ನ ಬ್ಯುಸಿನೆಸ್ ಮುಖ್ಯಸ್ಥರಾಗಿರುವ ನವಿಲ್, ಕಳೆದ ಐದು ವರ್ಷಗಳಲ್ಲಿ ಕಂಪನಿಯನ್ನು ಅಭೂತಪೂರ್ವ ಪ್ರಗತಿಯಲ್ಲಿ ಕೊಂಡೊಯ್ದಿದ್ದಾರೆ. ಇದೇ ವೇಳೆ, ಟಾಟಾ ಸಮೂಹದ ಸ್ಟಾರ್, ಆದಿತ್ಯಾ ಬಿರ್ಲಾ ರೀಟೇಲ್, ಸ್ಪೆನ್ಸರ್‌ನಂಥ ದಿಗ್ಗಜರೂ ಸಹ ಡಿಮಾರ್ಟ್ ಮಿಂಚಿನ ಓಟ ಕಂಡು ಬೆರಗಾಗುವಂತೆ ಆಗಿದೆ.
ಸರಕು ಪೂರೈಕೆಯ 48 ಗಂಟೆಯೊಳಗೆ ಪೂರೈಕೆದಾರರಿಗೆ ಪಾವತಿ ಮಾಡುವ ಮಾತು ನೀಡುವ ಹೊಸ ವ್ಯೂಹದೊಂದಿಗೆ ಮಾರುಕಟ್ಟೆಯ ಕಣಕ್ಕಿಳಿದ ನವಿಲ್, ಈ ನಡೆಯಿಂದಾಗಿ ತಮ್ಮ ಸಮೂಹದ ಮೇಲೆ ಪೂರೈಕೆದಾರರ ವಿಶ್ವಾಸ ವರ್ಧನೆಯಾಗುವಂತೆ ಮಾಡಿದ್ದರು.