alex Certify ಮುಂಬೈನಲ್ಲಿದ್ದಾನೆ ಜಗತ್ತಿನ ಅತಿ ಶ್ರೀಮಂತ ಭಿಕ್ಷುಕ; 2 ಫ್ಲಾಟ್ ಮಾಲೀಕ, ತಿಂಗಳಿಗೆ ಲಕ್ಷಾಂತರ ರೂ. ಆದಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಲ್ಲಿದ್ದಾನೆ ಜಗತ್ತಿನ ಅತಿ ಶ್ರೀಮಂತ ಭಿಕ್ಷುಕ; 2 ಫ್ಲಾಟ್ ಮಾಲೀಕ, ತಿಂಗಳಿಗೆ ಲಕ್ಷಾಂತರ ರೂ. ಆದಾಯ…!

ಭಿಕ್ಷುಕರೆಂದರೆ ಅತೀ ಬಡವರು, ಅವರಿಗೆ ಸ್ವಂತ ಮನೆ ಇರುವುದಿಲ್ಲ, ಆರ್ಥಿಕವಾಗಿ ತೊಂದರೆಯಲ್ಲಿರುವ ಅವರು ಕಷ್ಟದ ಜೀವನ ನಡೆಸುತ್ತಾರೆ ಎಂದೆಲ್ಲಾ ನೀವು ಭಾವಿಸಿರಬಹುದು. ಆದರೆ ಆಶ್ಚರ್ಯಕರ ರೀತಿಯಲ್ಲಿ ಸಂಪತ್ತನ್ನು ಸಂಗ್ರಹಿಸಿದ್ದು ಭಿಕ್ಷುಕರ ಬಗ್ಗೆ ಜನರಿಗಿರುವ ನಿರೀಕ್ಷೆಗಳನ್ನು ಹುಸಿಮಾಡಿರುವ ಓರ್ವ ಭಿಕ್ಷುಕನಿದ್ದಾನೆ. ಅವನ ಬಗ್ಗೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಿ.

ಎಕನಾಮಿಕ್ ಟೈಮ್ಸ್ ಪ್ರಕಾರ ಭಾರತದಲ್ಲಷ್ಟೇ ಅಲ್ಲ ವಿಶ್ವದ ಶ್ರೀಮಂತ ಭಿಕ್ಷುಕ ಎಂದು ಪರಿಗಣಿಸಲ್ಪಟ್ಟಿರುವ ಭರತ್ ಜೈನ್ ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅನೇಕ ಸುಶಿಕ್ಷಿತ ಕಾರ್ಪೊರೇಟ್ ವೃತ್ತಿಪರರಿಗಿಂತ ಹೆಚ್ಚಿನ ಹಣವನ್ನು ಆತ ಗಳಿಸುತ್ತಾನೆ.

ಬಾಲ್ಯದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ ಭರತ್ ಜೈನ್ ಔಪಚಾರಿಕ ಶಿಕ್ಷಣವನ್ನು ಪಡೆಯಲಾಗಲಿಲ್ಲ. ಈ ಸವಾಲುಗಳ ನಡುವೆ ಮದುವೆಯಾದ ನಂತರ ತನ್ನ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಭಿಕ್ಷೆ ಬೇಡುವ ಆತನ ಅಂದಾಜು ನಿವ್ವಳ ಮೌಲ್ಯವು ಸುಮಾರು 7.5 ಕೋಟಿ ರೂಪಾಯಿಯಷ್ಟಿದೆ, ಮಾಸಿಕ ಆದಾಯ 60,000 ದಿಂದ 75,000 ರೂಪಾಯಿ ಇದೆ. ಇದು ಭಾರತದಲ್ಲಿ ಅನೇಕ ವೃತ್ತಿಪರರ ಸರಾಸರಿ ವೇತನಕ್ಕಿಂತ ಹೆಚ್ಚು.

ಭಿಕ್ಷಾಟನೆಯಿಂದ ಗಳಿಸಿದ ಹಣದ ಜೊತೆಗೆ ಭರತ್ ಹಲವೆಡೆ ಹೂಡಿಕೆಗಳನ್ನು ಮಾಡಿದ್ದಾರೆ. ಅವರು ಮುಂಬೈನಲ್ಲಿ 1.4 ಕೋಟಿ ರೂಪಾಯಿ ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ ಮತ್ತು ಥಾಣೆಯಲ್ಲಿ ಎರಡು ಅಂಗಡಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರಿಗೆ ಮಾಸಿಕ 30 ಸಾವಿರ ರೂಪಾಯಿ ಆದಾಯ ಬರುತ್ತದೆ.

ತನ್ನ ಗಮನಾರ್ಹ ಸಂಪತ್ತಿನ ಹೊರತಾಗಿಯೂ ಭರತ್ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಂತಹ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ನಿಲ್ಲಿಸಿಲ್ಲ. ಅವರು ಪರೇಲ್ ಪ್ರದೇಶದಲ್ಲಿ ನೆಲೆಸಿದ್ದು ಅವರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರ ಕುಟುಂಬವೂ ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದು, ಅವರ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...