ತನ್ನ 40ನೇ ವಯಸ್ಸಿಗೆ ಆಕೆ 44 ಮಕ್ಕಳ ಮಹಾತಾಯಿ. ಕೇವಲ 13 ನೇ ವಯಸ್ಸಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಆಕೆ ಭೂಮಿಯ ಮೇಲಿನ ಅತ್ಯಂತ ಫಲವತ್ತಾದ ಮಹಿಳೆ ಎಂದು ಹೆಸರುವಾಸಿಯಾಗಿದ್ದಾರೆ.
ಉಗಾಂಡಾ ಮೂಲದ ಮರಿಯಮ್ ನಬಟಾಂಜಿ ಎಂಬ ಮಹಿಳೆ ಮಮ ಉಗಾಂಡಾ ( ಉಗಾಂಡಾದ ತಾಯಿ) ಎಂದೇ ಖ್ಯಾತರು. ಆಕೆ ತನ್ನ ಮೊದಲ ಅವಳಿ ಮಕ್ಕಳಿಗೆ ತಾಯಿಯಾದಾಗ ಕೇವಲ 13 ವರ್ಷ ವಯಸ್ಸಿನವರಾಗಿದ್ದರು.
36 ವರ್ಷಕ್ಕೆ ಕಾಲಿಡುವ ಹೊತ್ತಿಗೆ, ಮರಿಯಮ್ 42 ಶಿಶುಗಳಿಗೆ ಜನ್ಮ ನೀಡಿದ್ದರು. 40 ನೇ ವಯಸ್ಸಿನಲ್ಲಿ ಅವರು 44 ಮಕ್ಕಳನ್ನು ಹೊಂದಿದ್ದರು.
ತನ್ನ ಪತಿ ಈ ದೊಡ್ಡ ಕುಟುಂಬದಿಂದ ಹೊರನಡೆದ ನಂತರ ಆಕೆ ತನ್ನೆಲ್ಲಾ ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಬೇಕಾಗಿದೆ. ನಾಲ್ಕು ಬಾರಿ ಅವಳಿ ಮಕ್ಕಳು, ಐದು ಬಾರಿ ತ್ರಿವಳಿ ಮತ್ತು ಐದು ಬಾರಿ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ತನ್ನ ಮಕ್ಕಳ ಪೈಕಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ . ಸದ್ಯ ಮರಿಯಮ್ ಗಿರುವ 38 ಮಕ್ಕಳಲ್ಲಿ 20 ಗಂಡು 18 ಹೆಣ್ಣು ಮಕ್ಕಳಿದ್ದಾರೆ.
ಮರಿಯಮ್ ಕೇವಲ 12 ವರ್ಷದವಳಿದ್ದಾಗ ಆಕೆಯ ಪೋಷಕರು ಅವಳನ್ನು ಮಾರಾಟ ಮಾಡಿದಾಗ ಮದುವೆಯಾದರು. 13 ನೇ ವಯಸ್ಸಿಗೇ ಆಕೆ ಮೊದಲ ಮಗುವಿಗೆ ಜನ್ಮ ನೀಡಿದರು.
ವಿಶ್ವಬ್ಯಾಂಕ್ ಪ್ರಕಾರ, ಪ್ರತಿ ಮಹಿಳೆಗೆ ಸರಾಸರಿ 5.6 ಮಕ್ಕಳಿರುವ ಉಗಾಂಡಾದಲ್ಲಿ ಫಲವತ್ತತೆಯ ದರಗಳು ತುಂಬಾ ಹೆಚ್ಚಿವೆ ಎಂದು ಗಮನಿಸಬೇಕಾದ ಅಂಶವಾಗಿದೆ. ಇದು ವಿಶ್ವದ ಸರಾಸರಿ 2.4 ಮಕ್ಕಳಿಗಿಂತ ಎರಡು ಪಟ್ಟು ಹೆಚ್ಚು.
ಮರಿಯಮ್ ವೈದ್ಯರನ್ನು ಭೇಟಿ ಮಾಡಿದಾಗ, ವೈದ್ಯಕೀಯ ತಜ್ಞರು ಆಕೆ ಅಸಹಜವಾಗಿ ದೊಡ್ಡ ಅಂಡಾಶಯಗಳನ್ನು ಹೊಂದಿದ್ದು, ಇದು ಹೈಪರ್ ಓವ್ಯುಲೇಷನ್ ಎಂಬ ಸ್ಥಿತಿಗೆ ಕಾರಣವಾಯಿತು ಎಂದು ತಿಳಿಸಿದರು.
ಇಂತವರಿಗೆ ಗರ್ಭನಿರೋಧಕ ಮಾತ್ರೆಗಳು ಕೆಲಸ ಮಾಡುವುದಿಲ್ಲ ಮತ್ತು ತೀವ್ರ ಆರೋಗ್ಯ ಪರಿಸ್ಥಿತಿಗಳನ್ನು ಉಂಟುಮಾಡಬಹುದು ಎಂದು ಆಕೆಗೆ ತಿಳಿಸಲಾಯಿತು.
ದಿ ಡೈಲಿ ಮಾನಿಟರ್‌ನ ವರದಿಯ ಪ್ರಕಾರ, ಕಮಲಾದಲ್ಲಿನ ಮುಲಾಗೊ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ ಚಾರ್ಲ್ಸ್ ಕಿಗ್ಗುಂಡು, ಮರಿಯಮ್‌ನ ತೀವ್ರ ಫಲವತ್ತತೆಗೆ ಅನುವಂಶೀಯತೆ ಪ್ರಮುಖ ಕಾರಣ ಎಂದಿದ್ದಾರೆ.