![](https://kannadadunia.com/wp-content/uploads/2023/06/d5a332c0-46d7-45b3-9ebb-ec9dc4296694.jpg)
ಅಲಹಾಬಾದ್ನ ಮೋತಿಲಾಲ್ ನೆಹರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಎನ್ಎನ್ಐಟಿ) ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್) ವಿದ್ಯಾರ್ಥಿ ಲೋಕೇಶ್ ರಾಜ್ ಸಿಂಘಿ ಅವರು 2022 ರಲ್ಲಿ ಅಮೆಜಾನ್ ನಲ್ಲಿ ‘ಗ್ರಾಜುಯೇಟ್ ಸಾಫ್ಟ್ ವೇರ್ ಡೆವಲಪ್ಮೆಂಟ್ ಇಂಜಿನಿಯರ್’ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾದ ನಂತರ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಲೋಕೇಶ್ ರಾಜ್ ಸಿಂಘಿ ಅವರು 1.18 ಕೋಟಿ ರೂಪಾಯಿಯ ವಾರ್ಷಿಕ ಪ್ಯಾಕೇಜ್ನೊಂದಿಗೆ ಉದ್ಯೋಗದ ಪ್ರಸ್ತಾಪ ಪಡೆದರು.
ಲೋಕೇಶ್ ರಾಜ್ ಅವರಿಗೆ ನೀಡಲಾದ ಬೃಹತ್ ಪ್ಯಾಕೇಜ್ MNNIT ಯಲ್ಲಿ ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿಗೆ ನೀಡಲಾದ ಅತ್ಯಧಿಕ ಪ್ಯಾಕೇಜ್ ಆಗಿದೆ.
ಲೋಕೇಶ್ ರಾಜ್ ಅವರನ್ನು ಅಭಿನಂದಿಸುತ್ತಾ, “ಅವರ ಸಾಧನೆಯು MNNIT ಯ ಅನೇಕ ಉದಯೋನ್ಮುಖ ಉದ್ಯೋಗಿಗಳಿಗೆ ದೊಡ್ಡ ಕನಸು ಕಾಣಲು ಪ್ರೇರೇಪಿಸುತ್ತದೆ” ಎಂದು MNNIT ನಿರ್ದೇಶಕ ಪ್ರೊ.ಆರ್.ಎಸ್. ವರ್ಮಾ ಹೇಳಿದ್ದಾರೆ.
ಲೋಕೇಶ್ ಅಮೆರಿಕ ಮೂಲದ ಸಂಸ್ಥೆಯಾದ ಸೇಲ್ಸ್ ಫೋರ್ಸ್ನಿಂದ ಉದ್ಯೋಗದ ಪ್ರಸ್ತಾಪವನ್ನು ಸಹ ಪಡೆದಿದ್ದರು, ಆದರೆ ಅವರು ಆಫರ್ ಅನ್ನು ನಿರಾಕರಿಸಿದರು ಮತ್ತು ಅಮೆಜಾನ್ನ ಕೊಡುಗೆಯನ್ನು ಸ್ವೀಕರಿಸಲು ನಿರ್ಧರಿಸಿದರು. ಲೋಕೇಶ್ ರಾಜ್ ಆಗಸ್ಟ್ 2022 ರಲ್ಲಿ ಕಂಪನಿಗೆ ಸೇರಿಕೊಂಡು ಪ್ರಸ್ತುತ ಅಲ್ಲಿ ಕೆಲಸ ಮಾಡುತ್ತಿದ್ದಾರೆ.
“ಆಫ್-ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಈ ಕೆಲಸವನ್ನು ಪಡೆದಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ನನ್ನ ಎಲ್ಲಾ ಶಿಕ್ಷಕರು ಮತ್ತು ನನ್ನ ಪೋಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ರಾಜಸ್ಥಾನದ ಚುರು ಮೂಲದ ಲೋಕೇಶ್ ರಾಜ್ ಹೇಳಿದರು.
ಲೋಕೇಶ್ ತಂದೆ ಲಲಿತ್ ರಾಜ್ ಸಿಂಘಿ ಉದ್ಯಮಿಯಾಗಿದ್ದು ತಾಯಿ ಅಂಜು ಸಿಂಘಿ ಗೃಹಿಣಿ. ಲೋಕೇಶ್ ಅವರ ಅಣ್ಣ ಕೃತಿ ರಾಜ್ ಸಿಂಗ್ ಕೂಡ ಸಾಫ್ಟ್ ವೇರ್ ಡೆವಲಪರ್ ಆಗಿದ್ದಾರೆ.