ಹಾಲು ಮಾರಾಟ ಮಾಡುವ ಮೂಲಕ ದಿನವೊಂದಕ್ಕೆ 17 ಲಕ್ಷ ರೂ. ಗಳಿಸುತ್ತಿದ್ದಾರೆ ಹೈದರಾಬಾದ್ ನ ಕಿಶೋರ್ ಇಂದುಕುರಿ ಅವರು. ಹೈನುಗಾರಿಕೆ ಮೂಲಕ ದಿನಕ್ಕೆ ಲಕ್ಷಾಂತರ ರೂ.ಗಳನ್ನು ಸಂಪಾದಿಸುವ ಅವರ ಸ್ಪೂರ್ತಿದಾಯಕ ಕತೆಯನ್ನು ಇಲ್ಲಿ ಓದಿ..
ಕಿಶೋರ್ ಇಂದುಕುರಿ ಅವರ ಕಥೆ ಸ್ಫೂರ್ತಿದಾಯಕವಾಗಿದೆ. ಅಮೆರಿಕದಲ್ಲಿ ಇಂಟೆಲ್ ಉದ್ಯೋಗಿಯಾಗಿದ್ದ ಅವರು ಭಾರಿ ಸಂಬಳದ ಪ್ಯಾಕೇಜ್ ಅನ್ನು ಹೊಂದಿದ್ದರು. ಆದರೆ, ಅಮೆರಿಕದ ಜೀವನ ತೊರೆದ ಅವರು ಭಾರತಕ್ಕೆ ಮರಳಿದರು. ಬಳಿಕ ಇಲ್ಲಿ ಬೃಹತ್ ಡೈರಿ ಉದ್ಯಮವನ್ನು ನಿರ್ಮಿಸಿದರು. ಹೈದರಾಬಾದ್‌ನಲ್ಲಿರುವ ಸಿಡ್ ಡೈರಿ ಫಾರ್ಮ್ ಅತ್ಯುತ್ತಮವಾಗಿದೆ.
ಕಿಶೋರ್ ಇಂದುಕುರಿ ಹೈದರಾಬಾದ್‌ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಇವರು ಮೂಲತಃ ಕರ್ನಾಟಕದವರು. ಅವರು ಐಐಟಿ ಖರಗ್‌ಪುರದಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು. ಅದೇ ಸಂಸ್ಥೆಯಿಂದ ತಮ್ಮ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿದರು. ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಭಾರತಕ್ಕೆ ಮರಳಿ, ವ್ಯಾಪಾರ ತೆರೆಯಲು ನಿರ್ಧರಿಸಿದರು.
ಅನೇಕ ವ್ಯವಹಾರಗಳನ್ನು ಪ್ರಾರಂಭಿಸಿದರೂ ಅದು ವಿಫಲವಾಯಿತು. ತರಕಾರಿ ಬೆಳೆದು ಮಾರುತ್ತಿದ್ದರು. ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿದ್ರು. ಯಾವುದೂ ಫಲ ನೀಡಲಿಲ್ಲ. ಕೊನೆಗೆ 2012ರಲ್ಲಿ 20 ಹಸುಗಳನ್ನು ಖರೀದಿಸಿ ಡೈರಿ ಫಾರ್ಮ್ ಆರಂಭಿಸಿದ್ರು. ಇದರಲ್ಲಿ ಹಂತ-ಹಂತವಾಗಿ ಅವರು ಯಶಸ್ಸು ಕಂಡ್ರು. ಹಸುಗಳಿಗೆ ಹಾಲು ಕೊಡುವುದರಿಂದ ಹಿಡಿದು ಉತ್ಪನ್ನವನ್ನು ತಲುಪಿಸುವವರೆಗೆ ಎಲ್ಲವನ್ನೂ ಮಾಡುತ್ತಾರೆ.
ಕಿಶೋರ್ ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದರು. ಮೊದಲಿಗೆ ಉತ್ಪನ್ನ ಪ್ರಯತ್ನಿಸಿ ಬಳಿಕ ಹಣ ನೀಡುವಂತೆ ಕೇಳಿಕೊಂಡರು. ಇದು ಅವರಿಗೆ ಫಲಿಸಿತು. ಇದೀಗ, ಇಂದುಕುರಿ ಹೈದರಾಬಾದ್‌ನ ಅತಿದೊಡ್ಡ ಖಾಸಗಿ ಹಾಲು ಸರಬರಾಜುದಾರರಲ್ಲಿ ಒಬ್ಬರಾಗಿದ್ದಾರೆ. ಅವರ ಕಂಪನಿ ನೂರಾರು ರೈತರಿಂದ ಶುದ್ಧ ಹಾಲನ್ನು ಸಂಗ್ರಹಿಸುತ್ತದೆ. ಅವರು ಪ್ರತಿದಿನ ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದಾರೆ.
100ಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಫಾರ್ಮ್ ನಡೆಸುತ್ತಿದ್ದು, 120 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸಕ್ಕೆ ನಿಯೋಜಿಸಿದ್ದಾರೆ. ಅವರು ತಮ್ಮ ಸಂಪೂರ್ಣ ಉಳಿತಾಯವನ್ನು ವ್ಯಾಪಾರವನ್ನು ತೆರೆಯಲು ಹೂಡಿಕೆ ಮಾಡಿದರು. 1.3 ಕೋಟಿ ಸಾಲ ಪಡೆದು ಶಹಬಾದ್‌ನಲ್ಲಿ ಬೃಹತ್ ಫಾರ್ಮ್ ಖರೀದಿಸಿದ್ದರು. ಕಂಪನಿಯ 2020-21 ರ ಆದಾಯವು 44 ಕೋಟಿ ರೂ. ಇದ್ದರೆ, ಇದು 2021-22ರಲ್ಲಿ 64.5 ಕೋಟಿ ರೂ.ಗೆ (ದಿನಕ್ಕೆ ಸುಮಾರು 17 ಲಕ್ಷ ರೂ.) ಏರಿಕೆಯಾಗಿದೆ.