ಈ ಐಪಿಎಸ್ ಅಧಿಕಾರಿ ಸಿಮಲಾ ಪ್ರಸಾದ್ ಯಾರು ?
ಐಪಿಎಸ್ ಸಿಮಲಾ ಪ್ರಸಾದ್ 1980ರ ಅಕ್ಟೋಬರ್ ಲ್ಲಿ , ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದರು. ಆಕೆಯ ತಂದೆ ಭಾಗೀರಥ್ ಪ್ರಸಾದ್ ಐಎಎಸ್ ಅಧಿಕಾರಿ ಮತ್ತು ತಾಯಿ ಮೆಹ್ರುನ್ನಿಸಾ ಪರ್ವೇಜ್ ಭಾರತೀಯ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದು, 2005 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ .
ಐಪಿಎಸ್ ಸಿಮಲಾ ಪ್ರಸಾದ್ ಶೈಕ್ಷಣಿಕ ಮತ್ತು ವ್ರತ್ತಿ ಜೀವನ:
ಸಿಮಲಾ ಪ್ರಸಾದ್ ಅವರು ಸೇಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು ಮತ್ತು ನಂತರ ವಾಣಿಜ್ಯದಲ್ಲಿ ಪದವಿ ಪಡೆದರು. ನಂತರ ಅವರು ಭೋಪಾಲ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಚಿಕ್ಕ ವಯಸ್ಸಿನಿಂದಲೂ ನಟನೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಸಿಮಲಾ ಪ್ರಸಾದ್, ಇದೇ ಸಂದಭ೯ದಲ್ಲಿ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು.
ಸಿಮಾಲಾ ಪ್ರಸಾದ್ ಮಧ್ಯಪ್ರದೇಶದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಡಿಎಸ್ಪಿಯಾದರು. ಈ ಸಮಯದಲ್ಲಿ, ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಮ್ಮ ಸ್ವ-ಅಧ್ಯಯನವನ್ನು ಪ್ರಾರಂಭಿಸಿ, ಯಾವುದೇ ಕೋಚಿಂಗ್ ಪಡೆಯದೆ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿಎಸ್ಇ 2010 ಅನ್ನು, ತನ್ನ 22 ನೇ ವಯಸ್ಸಿನಲ್ಲಿ ಎಐಆರ್ 51 ಪಡೆಯುವ ಮೂಲಕ ತೇಗ೯ಡೆಯಾಗಿ ಐಎಎಸ್ ಅಧಿಕಾರಿಯಾದರು.
ಇಂದಿನ ಕಾಲದಲ್ಲಿ, ಸಾಮಾಜಿಕ ಮಾಧ್ಯಮದ ಕಾರಣದಿಂದಾಗಿ, ಐಎಎಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲೂ ಅತ್ಯಂತ ಜನಪ್ರಿಯರಾಗಿದ್ದಾರೆ ಮತ್ತು ಅವರನ್ನು ಸೆಲೆಬ್ರಿಟಿಗಳಂತೆ ಪರಿಗಣಿಸಲಾಗುತ್ತದೆ. ಹೀಗಿರುವಾಗ ಐಪಿಎಸ್ ಅಧಿಕಾರಿ ಸಿಮಲಾ ಪ್ರಸಾದ್ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಘುಬೀರ್ ಯಾದವ್ ಮತ್ತು ಮುಖೇಶ್ ತಿವಾರಿ ಅವರೊಂದಿಗೆ ‘ದಿ ನರ್ಮದಾ ಸ್ಟೋರಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಮಧ್ಯಪ್ರದೇಶದಾದ್ಯಂತ ಚಿತ್ರೀಕರಿಸಲಾಗಿರುವ, ನೈಜ ಘಟನೆಗಳನ್ನು ಆಧರಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಜೈಘಮ್ ಇಮಾಮ್ ನಿರ್ದೇಶಿಸಿದ್ದಾರೆ.
ಐಪಿಎಸ್ ಸಿಮಲಾ ಪ್ರಸಾದ್ ಒಬ್ಬ ನಟಿಯಾಗುವುದರ ಜೊತೆಗೆ ಅಧಿಕಾರಿಯಾಗಿ ತನ್ನ ಕೆಲಸವನ್ನು ನಿಭಾಯಿಸುತ್ತಾರೆ. ಆಕೆಗೆ ಅಧಿಕಾರಿಯಾಗುವ ಸ್ಪೂತಿ೯ ತನ್ನ ತಂದೆಯಾದರೆ ಮತ್ತು ಕಲೆಗೆ ತಾಯಿಯೆ ಸ್ಪೂತಿ೯ಯಾಗಿದ್ದಾರೆ.