13 ನೇ ವಯಸ್ಸಿನಲ್ಲಿರುವವರು ಪ್ರಾಥಮಿಕವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಶಾಲೆಯಲ್ಲಿ ವಿದ್ಯಾಭ್ಯಾಸ, ಸ್ನೇಹಿತರೊಂದಿಗೆ ಆಟಪಾಠದಲ್ಲಿ ಖುಷಿಪಡುತ್ತಾರೆ.
ಇಂತವರ ನಡುವೆ ಓರ್ವ ಬಾಲಕನೊಬ್ಬ ತನ್ನ 13ನೇ ವಯಸ್ಸಿನಲ್ಲಿ ಕಂಪನಿಯೊಂದನ್ನು ಸ್ಥಾಪಿಸಿದ್ದು ಹಣ ಸಂಪಾದಿಸುತ್ತಿದ್ದಾರೆ. ಮುಂಬೈ ಮೂಲದ ತಿಲಕ್ ಮೆಹ್ತಾ ಎಂಬ 13 ವರ್ಷದ ಬಾಲಕ ಒಮ್ಮೆ ತನ್ನ ಚಿಕ್ಕಪ್ಪನ ಮನೆಗೆ ಭೇಟಿ ನೀಡಿ ಮನೆಗೆ ವಾಪಸ್ಸಾಗಿದ್ದ. ಈ ವೇಳೆ ಅವನು ತನ್ನ ಪುಸ್ತಕವೊಂದನ್ನ ಚಿಕ್ಕಪ್ಪನ ಮನೆಯಲ್ಲೇ ಬಿಟ್ಟುಬಂದಿದ್ದು ನೆನಪಾಗಿ ಅದನ್ನು ಪಡೆಯಲು ಮುಂದಾದನು. ಮುಂಬರುವ ಪರೀಕ್ಷೆಗಳಿಗೆ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಲು ತಕ್ಷಣವೇ ಆ ಪುಸ್ತಕ ಪಡೆಯುವ ಅವಶ್ಯಕತೆಯಿತ್ತು.
ಹೀಗಾಗಿ ಸಂದಿಗ್ಧತೆಯಲ್ಲಿ ಸಿಲುಕಿದ ತಿಲಕ್ ಮೆಹ್ತಾ ಅದೇ ದಿನ ಪುಸ್ತಕದ ಪಾರ್ಸೆಲ್ ಪಡೆಯಲು ವಿವಿಧ ಕೊರಿಯರ್ ಏಜೆನ್ಸಿಗಳ ಬಾಗಿಲು ತಟ್ಟಿದ. ಆದರೆ ಕೊರಿಯರ್ ಸೇವೆಗಳು ತುಂಬಾ ದುಬಾರಿಯಾಗಿರುತ್ತವೆ ಅಥವಾ ಅದೇ ದಿನ ವಿತರಣೆ ಲಭ್ಯವಾಗುವುದಿಲ್ಲ ಎಂದು ತಿಳಿದು ನಿರಾಸೆಗೊಂಡ. ಇಂತಹ ಸ್ಥಿತಿ ತಿಲಕ್ ಮೆಹ್ತಾಗೆ ಉದ್ದಿಮೆ ಆರಂಭಿಸಲು ಪ್ರೇರಣೆಯಾಯಿತು.
ತುರ್ತು ಸಂದರ್ಭಗಳಲ್ಲಿ ತಮ್ಮ ಪಾರ್ಸೆಲ್ ಅನ್ನು ಸಾಧ್ಯವಾದಷ್ಟು ಬೇಗ ಪಡೆಯಲು ಸಾಧ್ಯವಿರುವ ಮಾರ್ಗಗಳ ಬಗ್ಗೆ ಯೋಚಿಸಿದ ತುಷಾರ್ ಮೆಹ್ತಾ, ಅದೇ ದಿನ ನಗರದೊಳಗೆ ವಿತರಣಾ ಸೇವೆಗಳನ್ನು ಒದಗಿಸುವ ಕಂಪನಿಯನ್ನು ಪ್ರಾರಂಭಿಸಲು ಮುಂದಾದರು. ‘ಪೇಪರ್ ಎನ್ ಪಾರ್ಸೆಲ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪಾರ್ಸೆಲ್ ಸೇವೆಯ ವೆಚ್ಚ-ಪರಿಣಾಮಕಾರಿತ್ವದ ಬಗ್ಗೆ ಚಿಂತಿತರಾದ ಯುವ ಉದ್ಯಮಿ ತುಷಾರ್ ಮುಂಬೈನಲ್ಲಿ ಕಾರ್ಯ ನಿರ್ವಹಿಸುವ ಡಬ್ಬಾವಾಲಾಗಳ ಕಾರ್ಯವನ್ನು ಸ್ಫೂರ್ತಿಯಾಗಿ ಪಡೆದರು.
ಆರಂಭಿಕವಾಗಿ ತಮ್ಮ ತಂದೆಯ ಆರ್ಥಿಕ ನೆರವಿನಿಂದ ಡಬ್ಬಾವಾಲಾಗಳನ್ನು ಬಳಸಿಕೊಂಡು ತುಷಾರ್, ಕಡಿಮೆ ವೆಚ್ಚದಲ್ಲಿ ನಗರದೊಳಗೆ ಪಾರ್ಸೆಲ್‌ಗಳನ್ನು ತಲುಪಿಸುವ ಉದ್ಯೋಗ ಶುರು ಮಾಡಿದರು.
ಅವರ ತಂದೆಯ ಆರಂಭಿಕ ಸಹಾಯದಿಂದ 2018 ರಲ್ಲಿ ವ್ಯಾಪಾರಗಳಿಗೆ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಅಗತ್ಯಗಳಿಗೆ ಸಹಾಯ ಮಾಡುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದರು. ಈಗ ಕಂಪನಿಯು 100 ಕೋಟಿ ರೂ. ವಹಿವಾಟು ನಡೆಸುತ್ತಿದೆ. ತಿಲಕ್ ಮೆಹ್ತಾ ಅವರ ಅಂದಾಜು ನಿವ್ವಳ ಮೌಲ್ಯವು 2021 ರ ಹೊತ್ತಿಗೆ 65 ಕೋಟಿ ರೂ.ಗಳಾಗಿದ್ದು, ಅವರ ಮಾಸಿಕ ಆದಾಯವು 2 ಕೋಟಿ ರೂ. ಆಗಿದೆ.