ಲಂಡನ್ ನಲ್ಲಿರುವ ಮುಖೇಶ್ ಅಂಬಾನಿಯವರ ಐಷಾರಾಮಿ ದುಬಾರಿ ಮನೆಗಿಂತಲೂ ಹೆಚ್ಚಿನ ಮೌಲ್ಯದ ಮನೆ ಖರೀದಿಸುವ ಮೂಲಕ ಭಾರತ ಮೂಲದ ಮತ್ತೊಬ್ಬ ಉದ್ಯಮಿ ಲಂಡನ್ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನ ದಂಗುಬಡಿಸಿದ್ದಾರೆ . ಬಿಲಿಯನೇರ್ ಉದ್ಯಮಿ ಮತ್ತು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಆದರ್ ಪೂನಾವಾಲಾ ಇತ್ತೀಚೆಗೆ ಲಂಡನ್ ನಲ್ಲಿ 25,000 ಚದರ ಅಡಿ ನಿವಾಸವನ್ನು ಸುಮಾರು 1446 ಕೋಟಿ ರೂ. ಗೆ ಖರೀದಿಸಿದ್ದಾರೆ.
42 ವರ್ಷ ವಯಸ್ಸಿನ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನಾವಾಲಾ ಅವರ ಈ ಹೊಸಮನೆ ಸ್ವಾಧೀನವು 2023 ರಲ್ಲಿ ಲಂಡನ್‌ನಲ್ಲಿ ಅತ್ಯಂತ ದುಬಾರಿ ಆಸ್ತಿ ವ್ಯವಹಾರವಾಗಿದೆ ಮತ್ತು ಲಂಡನ್‌ನಲ್ಲಿ ಇದುವರೆಗೆ ಮಾರಾಟವಾದ ಎರಡನೇ ದುಬಾರಿ ಮನೆಯಾಗಿದೆ.
ಹಲವಾರು ಭಾರತೀಯ ಬಿಲಿಯನೇರ್‌ಗಳು ಖಾಸಗಿ ನಿವಾಸಗಳನ್ನು ಹೊಂದಿರುವ ನಗರವಾದ ಲಂಡನ್ ನಲ್ಲಿ ಆದರ್ ಪೂನಾವಾಲಾ ಈಗ ಅತ್ಯಂತ ದುಬಾರಿ ಮನೆಯನ್ನು ಹೊಂದಿರುವ ಭಾರತೀಯರಾಗಿದ್ದಾರೆ. ಈ ಪಟ್ಟಿಯಲ್ಲಿ ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಸೇರಿದ್ದಾರೆ. ಲಂಡನ್‌ನಲ್ಲಿ 980 ಕೋಟಿ ರೂ.ಗೆ ಮನೆ ಖರೀದಿಸಿದ್ದ ಲಕ್ಷ್ಮಿ ಮಿತ್ತಲ್ ಮತ್ತು 592 ಕೋಟಿ ರೂ.ಗಳ ಮಹಲು ಹೊಂದಿರುವ ಮುಖೇಶ್ ಅಂಬಾನಿ, ಪೂನಾವಾಲಾ ಅವರಿಗಿಂತ ಮೊದಲು ಯುಕೆನಲ್ಲಿ ದುಬಾರಿ ಮನೆ ಹೊಂದಿರುವ ಭಾರತೀಯ ಮೂಲದ ಶ್ರೀಮಂತರೆಂದು ಹೆಸರು ಗಳಿಸಿದ್ದರು. ನಂತರ ರವಿ ರೂಯಾ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈಗ ಈ ಹೆಗ್ಗಳಿಕೆ ಆದರ್ ಪೂನಾವಾಲಾ ಅವರ ಪಾಲಾಗಿದೆ.
2023ರಲ್ಲಿ ಲಂಡನ್‌ನ ಪ್ರಸಿದ್ಧ ಆಸ್ತಿ ಹ್ಯಾನೋವರ್ ಲಾಡ್ಜ್ ಅನ್ನು ಖರೀದಿಸಲು ರಷ್ಯಾದ ಉದ್ಯಮಿ ಆಂಡ್ರೆ ಗೊಂಚರೆಂಕೊಗೆ ರೂಯಾ ಅಂದಾಜು 1200 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ. ಪೂನಾವಲ್ಲಾ ಅವರು ಹೊಸಮನೆ ಖರೀದಿಸುವ ಕೆಲವೇ ತಿಂಗಳುಗಳ ಮೊದಲು ಇದು ಇತ್ತೀಚಿನ ಇತಿಹಾಸದಲ್ಲಿ ಯುಕೆಯಲ್ಲಿನ ಅತಿದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರ ಎಂದು ಕರೆಯಲ್ಪಟ್ಟಿದೆ.
ರವಿ ರುಯಿಯಾ ಅವರು ಎಸ್ಸಾರ್ ಗ್ರೂಪ್‌ನ ಸಹಪಾಲುದಾರರು. ಅವರ ಹಿರಿಯ ಸಹೋದರ ಶಶಿ ರುಯಿಯಾ ಅವರೊಂದಿಗೆ ಅವರು ಹಡಗು, ಮೂಲಸೌಕರ್ಯ, ಲೋಹಗಳು, ಗಣಿಗಾರಿಕೆ ಮತ್ತು ತೈಲ ಸಂಸ್ಕರಣೆಯಲ್ಲಿ ಆಸಕ್ತಿ ಹೊಂದಿರುವ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಾರೆ. ರವಿ ರುಯಿಯಾ ಅವರು ಚೆನ್ನೈನ ಗಿಂಡಿಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.