
ವಿಜ್ಞಾನದಿಂದ ಆಧ್ಯಾತ್ಮಕ್ಕೆ: ಅಭಯ್ ಸಿಂಗ್, ಹರಿಯಾಣ ಮೂಲದವರು. IIT ಬಾಂಬೆನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ, ಅವರು ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಮುಂದಾದರು. ಛಾಯಾಗ್ರಹಣದಲ್ಲಿ ಅವರಿಗೆ ಆಸಕ್ತಿ ಹೆಚ್ಚಿತ್ತು ಮತ್ತು ಅದು ಅವರ ಜೀವನದಲ್ಲಿ ಹೊಸ ತಿರುವು ನೀಡಿತು. ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಅವರಿಗೆ ನಿಜವಾದ ಸಂತೋಷ ಆಧ್ಯಾತ್ಮದಲ್ಲಿ ಸಿಗುತ್ತದೆ ಎಂದು ಅರಿವಾಯಿತು.
ಆಧ್ಯಾತ್ಮದಲ್ಲಿ ಆಳವಾದ ಆಸಕ್ತಿ: ಅಭಯ್ ಸಿಂಗ್, ತಮ್ಮ ಜೀವನದಲ್ಲಿ ಹಲವು ವಿಷಯಗಳನ್ನು ಅನ್ವೇಷಿಸಿದ್ದು, ವಿಜ್ಞಾನದಿಂದ ಆರಂಭಿಸಿ, ಕಲೆ, ತತ್ವಶಾಸ್ತ್ರ ಮತ್ತು ಅಂತಿಮವಾಗಿ ಆಧ್ಯಾತ್ಮದತ್ತ ತಮ್ಮ ಗಮನ ಹರಿಸಿದರು. ಅವರು ಸೋಕ್ರಟೀಸ್ ಮತ್ತು ಪ್ಲೇಟೋರ ಕೃತಿಗಳನ್ನು ಅಧ್ಯಯನ ಮಾಡಿದ್ದಲ್ಲದೇ ಮನಸ್ಸಿನ ಕಾರ್ಯನಿರ್ವಹಣೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರು. ಅಂತಿಮವಾಗಿ ಶಿವನ ಭಕ್ತರಾದ ಅವರು, ಆಧ್ಯಾತ್ಮದಲ್ಲಿ ತಮ್ಮನ್ನು ತಾವು ಕಂಡುಕೊಂಡರು.
ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ: ಅಭಯ್ ಸಿಂಗ್, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುತ್ತಾರೆ. ಅವರು ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕತೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವರ IIT ದಿನಗಳ ಫೋಟೋಗಳು ಮತ್ತು ಸ್ನೇಹಿತರೊಂದಿಗಿನ ಚಿತ್ರಗಳನ್ನು ಸಹ ಅವರು ಹಂಚಿಕೊಳ್ಳುತ್ತಾರೆ.
View this post on Instagram
Meet IITian Baba at the Maha Kumbh, who did Aerospace Engineering from IIT Bombay but left everything for spirituality.
Meanwhile, illiterate Leftists and Seculars mock Sanatanis. pic.twitter.com/vM0XI7rIFS
— BALA (@erbmjha) January 13, 2025
View this post on Instagram