alex Certify 10 ಮತ್ತು 12ನೇ ತರಗತಿಯಲ್ಲಿ ಫೇಲ್ ಆಗಿದ್ದ ಅಂಜುಶರ್ಮಾ ಪ್ರಥಮ ಪ್ರಯತ್ನದಲ್ಲೇ IAS ಪಾಸ್; ಸ್ಫೂರ್ತಿದಾಯಕವಾಗಿದೆ ಅಂಜು ಶರ್ಮಾ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಮತ್ತು 12ನೇ ತರಗತಿಯಲ್ಲಿ ಫೇಲ್ ಆಗಿದ್ದ ಅಂಜುಶರ್ಮಾ ಪ್ರಥಮ ಪ್ರಯತ್ನದಲ್ಲೇ IAS ಪಾಸ್; ಸ್ಫೂರ್ತಿದಾಯಕವಾಗಿದೆ ಅಂಜು ಶರ್ಮಾ ಕಥೆ

ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅನುತ್ತೀರ್ಣರಾಗುವವರೆಲ್ಲಾ ದಡ್ಡರೆಂದಲ್ಲ. ಒಮ್ಮೆ ಇಂತಹ ಪರೀಕ್ಷೆಗಳಲ್ಲಿ ಫೇಲ್ ಆದವರು ಮುಂದೆ ದೊಡ್ಡ ಹುದ್ದೆಗೇರಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುವುದು ತಪ್ಪಾಗುತ್ತದೆ.

ಯಾಕೆಂದರೆ 10 ನೇ ತರಗತಿ ಮತ್ತು 12 ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದವರು ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದು ಐಎಎಸ್ ಅಧಿಕಾರಿ ಅಂಜು ಶರ್ಮಾ ಅವರ ಕಥೆ.

ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ರು. ಕುತೂಹಲಕಾರಿ ಅಂಶ ಅಂದರೆ, ಅಂಜು ಶರ್ಮಾ 10 ನೇ ತರಗತಿಯ ಪ್ರಿ-ಬೋರ್ಡ್ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ಮತ್ತು 12 ನೇ ತರಗತಿಯಲ್ಲಿ ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಅವರು ಇತರ ವಿಷಯಗಳಲ್ಲಿ ಡಿಸ್ಟಿಂಕ್ಷನ್ ಅಂಕಗಳನ್ನು ಪಡೆದಿದ್ದರು.

ಐಎಎಸ್ ಅಧಿಕಾರಿ ಅಂಜು ಶರ್ಮಾ ಈ ಎರಡೂ ವೈಫಲ್ಯಗಳನ್ನು ಕಲಿಕೆಯ ಅನುಭವವಾಗಿ ಬಳಸಿಕೊಂಡು ಅಂತಿಮವಾಗಿ ಅವರು ಕೇವಲ 22 ವರ್ಷದವರಾಗಿದ್ದಾಗ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಅಂಜು ಶರ್ಮಾ ಜೈಪುರದಲ್ಲಿ ಬಿಎಸ್ಸಿ ಮತ್ತು ಎಂಬಿಎ ಮುಗಿಸಿದ್ದಾರೆ. IAS ಅಧಿಕಾರಿಯಾದ ನಂತರ ಅವರು 1991 ರಲ್ಲಿ ರಾಜ್‌ಕೋಟ್‌ನಲ್ಲಿ ಸಹಾಯಕ ಕಲೆಕ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪ್ರಸ್ತುತ ಗಾಂಧಿನಗರದಲ್ಲಿ ಸರ್ಕಾರಿ ಶಿಕ್ಷಣ ಇಲಾಖೆ (ಉನ್ನತ ಮತ್ತು ತಾಂತ್ರಿಕ ಶಿಕ್ಷಣ) ಸಚಿವಾಲಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...