ಅಸ್ಸಾಂನ ‘ದಿ ಗ್ರೇಟ್ ಖಲಿ’ ಎಂದು ಕರೆಯಲ್ಪಡುವ ಜಿತೇನ್ ಡೋಲಿ ನಿಸ್ಸಂದೇಹವಾಗಿ ತನ್ನ ಪ್ರದೇಶದ ಅತ್ಯಂತ ಎತ್ತರದ ವ್ಯಕ್ತಿ. ಆತ 6 ಅಡಿ ಮತ್ತು 8 ಇಂಚು ಎತ್ತರವಾಗಿದ್ದು, ಜನ ಸಾಮಾನ್ಯರ ನಡುವೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆತ ಅಲ್ಲೈ ಎಂದು ಗುರುತಿಸಿಕೊಳ್ಳಲು ಬಯಸುತ್ತಾರೆ.
ಅಸ್ಸಾಂನ ಲಖಿಂಪುರ ಜಿಲ್ಲೆಯ ಜೋನೈ ಎಂಬಲ್ಲಿ ವೀಳ್ಯದೆಲೆ ಕೃಷಿಕರಾಗಿರುವ ಜಿತೇನ್ಗೆ ತನ್ನ ದೇಹವನ್ನು ಕಾಪಾಡಿಕೊಳ್ಳಲು ಭಾರೀ ಪ್ರಮಾಣದ ಆಹಾರದ ಅಗತ್ಯವೂ ಇದೆ.
ನನಗೆ ಹಸಿವು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ಎರಡು ಕಿಲೋಗ್ರಾಂಗಳಷ್ಟು ಅನ್ನ, ಒಂದು ಕಿಲೋ ಮೀನು ಮತ್ತು ಮಾಂಸ, 200 ಗ್ರಾಂ ಮೆಣಸಿನಕಾಯಿ ಮತ್ತು ಇತರ ಮಸಾಲೆಗಳನ್ನು ಒಳಗೊಂಡಿರುವ ಊಟ ಪ್ರತಿ ಹೊತ್ತಿಗೂ ಬೇಕು ಎಂದು ಅವರು ಹೇಳಿಕೊಳ್ಳುತ್ತಾರೆ.
ಖಲಿಯಿಂದ ಪ್ರೇರಿತರಾಗಿ ಆತನಂತೆಯೇ ಆಗಬೇಕೆಂದು 49 ವರ್ಷದ ಜಿತೇನ್ ಆಸೆ ಹೊಂದಿದ್ದು, ಸದ್ಯಕ್ಕೆ, ಆರ್ಥಿಕ ಪರಿಸ್ಥಿತಿ ಆತನನ್ನು ಹಿಡಿದಿಟ್ಟಿದೆ. ಬ್ರಹ್ಮಪುತ್ರ ನದಿಯ ಪ್ರವಾಹದಲ್ಲಿ ಅವರ ಬಹುತೇಕ ಕೃಷಿ ಭೂಮಿ ಕೊಚ್ಚಿ ಹೋಗಿರುವುದು ಆರ್ಥಿಕವಾಗಿ ಇನ್ನಷ್ಟು ಜರ್ಝರಿತರನ್ನಾಗಿ ಮಾಡಿದೆ.
ಎತ್ತರ ಮತ್ತು ದೈಹಿಕ ಸಾಮರ್ಥ್ಯವು ಯಾವಾಗಲೂ ಆತನಿಗೆ ಅನುಕೂಲವಾಗಿದೆ. ಹಳ್ಳಿಗರಿಗೂ ಅನುಕೂಲವಾಗಿದೆ. ವಾಹನವು ಕೆಸರಿನಲ್ಲಿ ಸಿಲುಕಿದಾಗ ನೀವು ಜಿತೇನ್ ಕರೆಯಬೇಕು ಹೊರತು ಕ್ರೇನ್ ಆಪರೇಟರ್ ಅಲ್ಲ ಎಂಬ ಮಾತಿದೆ. ಆತ ತನ್ನ ಭುಜದ ಮೇಲೆ ಮೋಟಾರ್ ಸೈಕಲ್ ಅನ್ನು ಸುಲಭವಾಗಿ ಎತ್ತುತ್ತಾನೆ, ತನ್ನ ಕೆಲಸದ ಸ್ಥಳದಲ್ಲಿ ನಾಲ್ಕು ಚೀಲ ಸಿಮೆಂಟ್ ಅನ್ನು ಸಹ ಎತ್ತುತ್ತಾನೆ.
ನಾನು ಬಾಲ್ಯದಿಂದಲೂ ಹೀಗೆಯೇ ಇದ್ದೇನೆ ಎಂದು ಹೇಳುವ ಜಿತೇನ್, ನಾನು ಜನರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.