alex Certify ಮೈಕ್ರೋಸಾಫ್ಟ್‌ ಸಮಸ್ಯೆ ಸರಿಪಡಿಸಿ ಲಕ್ಷಾಂತರ ರೂ. ಬಹುಮಾನ ಪಡೆದ ಭಾರತೀಯ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಕ್ರೋಸಾಫ್ಟ್‌ ಸಮಸ್ಯೆ ಸರಿಪಡಿಸಿ ಲಕ್ಷಾಂತರ ರೂ. ಬಹುಮಾನ ಪಡೆದ ಭಾರತೀಯ ಯುವತಿ

ಸ್ವಯಂ ಕಲಿಕೆಯಿಂದ ಟೆಕ್ಕಿಯಾಗಿರುವ ಅದಿತಿ ಸಿಂಗ್ ತಂತ್ರಜ್ಞಾನ ಲೋಕದ ದಿಗ್ಗಜ ಮೈಕ್ರೋಸಾಫ್ಟ್‌ನ ದೊಡ್ಡದೊಂದು ಸಮಸ್ಯೆಯನ್ನು ಸರಿಪಡಿಸಿ $30,000 (22 ಲಕ್ಷ ರೂಪಾಯಿ) ಬಹುಮಾನ ಪಡೆದುಕೊಂಡಿದ್ದಾರೆ.

ಎಥಿಕಲ್ ಹ್ಯಾಕರ್‌ ಆಗಿರುವ 20 ವರ್ಷದ ಈ ಯುವತಿ ಮೈಕ್ರೋಸಾಫ್ಟ್‌ನ ಅಜ಼ುರೆ ತಂತ್ರಾಂಶದಲ್ಲಿ ರಿಮೋಟ್ ಕಂಟ್ರೋಲ್ ಎಕ್ಸಿಕ್ಯೂಷನ್ ಎಂಬ ಬಗ್‌ (ಲೋಪ) ಕಂಡುಹಿಡಿದಿದ್ದಾರೆ.

ಕೊರೋನಾ ಸಂಕಷ್ಟದಲ್ಲಿರುವವರಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ: ಮತ್ತೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆ

ವೈದ್ಯೆಯಾಗುವ ಆಸೆಯಿಂದ ಕೋಟಾದ ಖಾಸಗಿ ಸಂಸ್ಥೆಯೊಂದರಲ್ಲಿ ಹತ್ತನೇ ತರಗತಿ ಬಳಿಕ ಸೇರಿಕೊಂಡಿರುವ ಅದಿತಿ ಆರಂಭದಲ್ಲಿ ಸೈಬರ್‌ ಭದ್ರತೆ ತಜ್ಞೆಯಾಗುವ ಲೆಕ್ಕಾಚಾರ ಇಟ್ಟುಕೊಂಡಿರಲಿಲ್ಲ.

ಮಳೆಗಾಲದಲ್ಲಿ ‘ಕೂದಲು-ಚರ್ಮ’ದ ಆರೈಕೆ ಹೀಗಿರಲಿ

’ಮ್ಯಾಪ್‌ಮೈಇಂಡಿಯಾ’ ಎಂಬ ಕಂಪನಿಯ ಪೋರ್ಟಲ್‌ ಅನ್ನು ಎಥಿಕಲ್ ಆಗಿ ಹ್ಯಾಕ್ ಮಾಡಿದ್ದ ಅದಿತಿ, ಶಾಲೆಯಲ್ಲಿ ಓದುತ್ತಿದ್ದಾಗಲೇ ಮೊದಲ ಕೆಲಸ ಪಡೆದುಕೊಂಡಿದ್ದರು. ಎಥಿಕಲ್ ಹ್ಯಾಕಿಂಗ್ ಸಂಬಂಧದ ಎಲ್ಲಾ ಜ್ಞಾನವನ್ನೂ ತಾವು ಯೂಟ್ಯೂಬ್‌ನಲ್ಲಿ ಪಡೆದುಕೊಂಡಿದ್ದಾಗಿ ಅದಿತಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...