ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ. ಆದರೆ ಇಂದು ಎಷ್ಟೋ ಮಕ್ಕಳು ಪಾಲಕರನ್ನು ಬೀದಿ ಪಾಲು ಮಾಡುವುದನ್ನು ನೋಡುತ್ತಲೇ ಇದ್ದೇವೆ. ಇಲ್ಲೊಂದು ಹೃದಯವಿದ್ರಾವಕ ಘಟನೆಯಲ್ಲಿ ಮಗಳು ಮತ್ತು ತಾಯಿಗೂ ಇದೇ ಗತಿಯಾಗಿದೆ. ಇಬ್ಬರಿಗೂ ವಯಸ್ಸಾಗಿದ್ದು ಮರದ ಕೆಳಗೆ ದಿನ ನೂಕುತ್ತಿದ್ದಾರೆ.
ತೆಲಂಗಾಣ ಜಿಲ್ಲೆಯ ಪೆದ್ದಪಲ್ಲಿಯ ರಾಮಗುಂಡಂನಲ್ಲಿ ವೀರಮ್ಮ ಎಂಬ 95 ವರ್ಷದ ವೃದ್ಧೆಯೊಬ್ಬರು ವರ್ಷದಿಂದ ಮರದ ಕೆಳಗೆ ಜೀವನ ಸಾಗಿಸುತ್ತಿದ್ದಾರೆ. ಅವರೊಂದಿಗೆ, ಅವರ 76 ವರ್ಷದ ಮಗಳು ರಾಜಮ್ಮ ವಾಸಿಸುತ್ತಾರೆ. ಮಗಳು ತಾಯಿಯನ್ನು ನೋಡಿಕೊಳ್ಳುತ್ತಾ ಬೀದಿಗಳಲ್ಲಿ ಅಡುಗೆ ಮಾಡುತ್ತಾರೆ.
ಅವರು ಮರದ ಕೆಳಗೆ ಆಹಾರವನ್ನು ಬೇಯಿಸುತ್ತಾರೆ. ಪ್ಲಾಸ್ಟಿಕ್ ಹಾಳೆಗಳಿಂದ ಟೆಂಟ್ ತರಹದ ರಚನೆಯನ್ನು ತಯಾರಿಸಿಕೊಂಡಿದ್ದಾರೆ. ಸುಡುವ ಬಿಸಿಲು, ತೀವ್ರವಾದ ಚಳಿ, ಬಿರುಗಾಳಿ ಅಥವಾ ಭಾರೀ ಮಳೆ ಏನೇ ಬಂದರೂ ಇಲ್ಲಿಯೇ ಅವರ ವಾಸ. 5 ವರ್ಷಗಳಿಂದ ಇಬ್ಬರೂ ಹೀಗೆಯೇ ಜೀವನ ನಡೆಸುತ್ತಿದ್ದಾರೆ.
ವೀರಮ್ಮ ಅವರಿಗೆ ಇಬ್ಬರು ಗಂಡು ಮತ್ತು ಮಗಳು ರಾಜಮ್ಮ ಇದ್ದರು ಮತ್ತು ಅವರು ಹತ್ತಿರದ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಆದರೆ, ವೀರಮ್ಮ ಅವರ ಪತಿ ನಿಧನದ ನಂತರ ಕುಟುಂಬವು ಬಡತನಕ್ಕೆ ತುತ್ತಾಯಿತು.
ವೀರಮ್ಮನ ಪುತ್ರರಿಗೆ ನಿಶ್ಚಿತ ಉದ್ಯೋಗವಿಲ್ಲ, ಆದರೆ ಜೀವನೋಪಾಯಕ್ಕಾಗಿ ಎಲ್ಲಾ ರೀತಿಯ ಕೂಲಿ ಕೆಲಸಗಳನ್ನು ಮಾಡುತ್ತಾ ಹಳ್ಳಿಯಿಂದ ಹಳ್ಳಿಗೆ ಅಲೆದಾಡುತ್ತಾರೆ. ಆದ್ದರಿಂದ ಇವರಿಗೆ ಬೀದಿಯೇ ಗತಿಯಾಗಿದೆ. ರಾಜ್ಯ ಸರ್ಕಾರ ಅಲ್ಪ ಪಿಂಚಣಿ ಮೊತ್ತ ಮತ್ತು ಅಕ್ಕಿಯನ್ನು ನೀಡುತ್ತದೆ. ಆದರೆ ಅವರಿಗೆ ಇನ್ನೂ ತಲೆಯ ಮೇಲೆ ಸೂರು ಇಲ್ಲ.