alex Certify ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದ ಟಾಪ್ ನಟ ಇಂದು ಕೆಲಸವಿಲ್ಲದೇ ಖಾಲಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದ ಟಾಪ್ ನಟ ಇಂದು ಕೆಲಸವಿಲ್ಲದೇ ಖಾಲಿ….!

ತೆರೆಮೇಲಿನ ನಾಯಕ ಪಾತ್ರಧಾರಿಗಳಂತೆ ಅನೇಕ ಬಾರಿ ಸಹ ಕಲಾವಿದರು ಕೂಡ ಚಿತ್ರದ ಮೇಲೆ ಪ್ರಭಾವ ಬೀರುತ್ತಾರೆ. ಅಂಥವರು ದೀರ್ಘಕಾಲ ಸಿನಿರಸಿಕರ ನೆನಪಿನಲ್ಲಿ ಉಳಿಯುತ್ತಾರೆ. 90 ರ ದಶಕದಲ್ಲಿ ಜನಪ್ರಿಯ ಹಾಸ್ಯನಟರಾಗಿದ್ದ ಅಂತಹ ನಟರೊಬ್ಬರು ಎಂದಿಗೂ ಟಾಪ್ ಹೀರೋ ಆಗಲು ಸಾಧ್ಯವಾಗಲೇ ಇಲ್ಲ, ಅಷ್ಟೇ ಅಲ್ಲದೇ ಈಗ ಕೆಲಸವಿಲ್ಲದೆ ಕೂತಿದ್ದಾರೆ.

ದೂರದರ್ಶನ ಧಾರಾವಾಹಿಗಳೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಆ ನಟ ಅಮಿತಾಬ್ ಬಚ್ಚನ್, ಗೋವಿಂದ, ಮಾಧುರಿ ದೀಕ್ಷಿತ್ ಮತ್ತು ಇತರ ಸೂಪರ್ ಸ್ಟಾರ್ ಗಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಹಾಸ್ಯ ಪಾತ್ರಗಳಿಂದ ಎಲ್ಲರನ್ನೂ ಆಕರ್ಷಿಸಿದರು. ಅವರು ಬೇರೆ ಯಾರೂ ಅಲ್ಲ ನಟ ಟಿಕು ತಲ್ಸಾನಿಯಾ.

ಟಿಕು ತಲ್ಸಾನಿಯಾ ಅವರು 1984 ರಲ್ಲಿ ʼಯೇ ಜೋ ಹೈ ಜಿಂದಗಿʼ ಧಾರಾವಾಹಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ 1990 ರ ದಶಕದಲ್ಲಿ ʼಯೇ ದುನಿಯಾ ಗಜಬ್ ಕಿ, ಜಮಾನಾ ಬದಲ್ ಗಯಾ ಮತ್ತು ಏಕ್ ಸೇ ಬದ್ ಕರ್ ಏಕ್ʼ ನಂತಹ ಹಿಟ್ ಟಿವಿ ಧಾರಾವಾಹಿಗಳಲ್ಲಿ ನಟಿಸಿದರು.

ಅವರು 1986 ರಲ್ಲಿ ಪ್ಯಾರ್ ಕೆ ದೋ ಪಾಲ್ ಚಲನಚಿತ್ರದೊಂದಿಗೆ ತಮ್ಮ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು . ನಂತರ ದಿಲ್ ಹೈ ಕೆ ಮಂತಾ ನಹೀನ್, ಕಭಿ ಹಾ ಕಭಿ ನಾ, ಹಮ್ ಹೇ ರಹೀ ಪ್ಯಾರ್ ಕೆ, ಉಮರ್ 55 ಕಿ ದಿಲ್ ಬಚ್ಪನ್ ಕಾ, ಬೋಲ್ ರಾಧಾ ಬೋಲ್, ಅಂದಾಜ್ ಅಪ್ನಾ ಅಪ್ನಾ, ಹುಲ್ಚುಲ್ , ಮಿ. ಬೇಚಾರ, ಕೂಲಿ ನಂ. 1, ಬಡೇ ಮಿಯಾನ್ ಚೋಟೆ ಮಿಯಾನ್ ಮತ್ತು ರಾಜಾ ಹಿಂದೂಸ್ತಾನಿ ಸೇರಿದಂತೆ ಮುಂತಾದ ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಅಮಿತಾಭ್ ಬಚ್ಚನ್, ಗೋವಿಂದ, ಅಮೀರ್ ಖಾನ್ ಮತ್ತು ಇತರ ಸೂಪರ್‌ಸ್ಟಾರ್‌ಗಳ ಜೊತೆಗೆ 90 ರ ದಶಕದಲ್ಲಿ ಕಾಮಿಡಿ ಕಿಂಗ್ ಆಗಿ ತಮ್ಮನ್ನು ಗುರುತಿಸಿಕೊಂಡರು. 1996 ರ ರಾಜ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಒಂದು ದೃಶ್ಯ ತಮ್ಮನ್ನು ಅಸಮಾಧಾನಗೊಳ್ಳುವಂತೆ ಮಾಡಿದ್ದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.

ನಿರ್ದೇಶಕರು ಒಂದು ದೃಶ್ಯವನ್ನು 4-5 ಬಾರಿ ಮಾಡುವಂತೆ ಮಾಡಿದ್ದರು. ಪೂರ್ಣ ದೃಶ್ಯವನ್ನು ಒಂದೇ ಬಾರಿಗೆ ಮಾಡುವಂತೆ ನಿರ್ದೇಶಕರು ಕೇಳಿದಾಗ, ಕೊನೆಯ ಟೇಕ್‌ನಲ್ಲಿ ಮತ್ತೆ ಆ ಟೇಕ್ ಮಾಡಬಾರದು ಎಂದು ತಮ್ಮ ಬಟ್ಟೆ ಹರಿದು ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಗಮನಾರ್ಹ ಸಂಗತಿ ಎಂದರೆ ನಾನು ಸಿಟ್ಟುಮಾಡಿಕೊಳ್ಳುವುದಿಲ್ಲ ಎಂಬ ಡೈಲಾಗ್ ಹೇಳಬೇಕಾಗಿದ್ದ ಸೀನ್ ಅವರಿಗೆ ಸಿಟ್ಟು ತರಿಸಿತ್ತಂತೆ.

ಒಂದು ಕಾಲದಲ್ಲಿ ಬಾಲಿವುಡ್ ಮಾತ್ರವಲ್ಲ ಕಿರುತೆರೆಯಲ್ಲಿಯೂ ಸ್ಟಾರ್ ಆಗಿದ್ದ ಈ ನಟ ಈಗ ಕೆಲಸವಿಲ್ಲದೆ ಕುಳಿತಿದ್ದಾರೆ. ಅಗತ್ಯ ಇರುವ ಕಡೆಯೆಲ್ಲಾ ಆಡಿಷನ್ ನೀಡುತ್ತಿದ್ದೇನೆ ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು . “ಕ್ಯಾಬರೆ ಡ್ಯಾನ್ಸ್, ಎರಡು ಪ್ರೇಮಗೀತೆಗಳು ಮತ್ತು ಹಾಸ್ಯನಟ ಬಂದು ತನ್ನ ಪಾತ್ರ ಮಾಡಿ ಹೋಗುವಂತಹ ಫಾರ್ಮುಲಾ ಚಿತ್ರಗಳು ಇದ್ದ ಕಾಲ ಕಳೆದುಹೋಗಿದೆ. ಅದು ಈಗ ಬದಲಾಗಿದೆ ನಾನು ಈಗ ಸ್ವಲ್ಪ ಕೆಲಸ ಮಾಡಲು ಬಯಸುತ್ತೇನೆ, ಆದರೆ ಸರಿಯಾದ ರೀತಿಯ ಪಾತ್ರಗಳು ನನಗೆ ಸಿಗುತ್ತಿಲ್ಲ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...