
ರಾಮ್ ಬಾಬೂ ಉತ್ತರ ಪ್ರದೇಶದ ಬಾವಾರ್ ಎಂಬ ಹಳ್ಳಿಯ ದಿನಗೂಲಿ ಕಾರ್ಮಿಕನ ಮಗ. ರಾಮ್ ಬಾಬೂ ಹಣ ಸಂಪಾದನೆಗಾಗಿ ಮಾಣಿಯಾಗಿ ಕೆಲಸ ಮಾಡಿ ಅಥ್ಲೆಟಿಕ್ಸ್ ತರಬೇತಿಗೆ ಸ್ವಯಂ ಹಣಕಾಸು ನಿರ್ವಹಣೆ ಮಾಡಿಕೊಳ್ಳುತ್ತಿದ್ದರು. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ MGNREGA ಯೋಜನೆಯಡಿ ರಸ್ತೆ ನಿರ್ಮಾಣದಲ್ಲಿ ತಮ್ಮ ತಂದೆಯೊಂದಿಗೆ ದಿನಗೂಲಿ ಮಾಡಿದ್ದರು. ಅವರ ತಂದೆ ತಿಂಗಳಿಗೆ 3,000-3,500 ರೂ ಗಳಿಸಿ 6 ಜನರಿದ್ದ ಕುಟುಂಬವನ್ನು ನಡೆಸುತ್ತಿದ್ದರು. ಅವರ ಇಡೀ ಕುಟುಂಬ ಜೀವನದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದೆ.
ವಾರಣಾಸಿಯಲ್ಲಿ ಮಾಣಿಯಾಗಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಗ್ರಾಮದಲ್ಲಿ ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ರಸ್ತೆ ನಿರ್ಮಾಣಕ್ಕಾಗಿ ನನ್ನ ತಂದೆಯೊಂದಿಗೆ ಹೊಂಡ ತೋಡುವವರೆಗೆ ನಾನು ನನ್ನ ಜೀವನದಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ ಎಂದು 24 ವರ್ಷದ ರಾಮ್ ಬಾಬೂ ತಿಳಿಸಿದ್ದಾರೆ.
ಬಾಬೂ ಅವರು ಸುಮಾರು 17 ವರ್ಷ ವಯಸ್ಸಿನವರಾಗಿದ್ದಾಗ ವಾರಣಾಸಿಗೆ ತೆರಳಿದರು. ಅಲ್ಲಿ ತರಬೇತಿಗೆ ಉತ್ತಮವಾದ ಅಥ್ಲೆಟಿಕ್ಸ್ ಕ್ರೀಡಾಂಗಣವಿತ್ತು.
ಅಲ್ಲಿ ಅವರು ತರಬೇತುದಾರ ಚಂದ್ರಬಹನ್ ಯಾದವ್ ಅವರನ್ನು ಭೇಟಿಯಾಗಿ ತಿಂಗಳಿಗೆ 1500 ರೂ.ನಂತೆ ಮನೆಯೊಂದನ್ನ ಬಾಡಿಗೆಗೆ ಪಡೆದರು. ತಮ್ಮ ಪೋಷಕರು ನೀಡ್ತಿದ್ದ ಅಲ್ಪಸ್ವಲ್ಪ ಹಣದ ಜೊತೆಗೆ ಒಂದು ತಿಂಗಳು ಅರೆಕಾಲಿಕ ಸರ್ವರ್ ಆಗಿ ಕೆಲಸ ಮಾಡಿ ತಿಂಗಳಿಗೆ 3 ಸಾವಿರ ರೂಪಾಯಿ ಸಂಪಾದಿಸುತ್ತಿದ್ದರು.
ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ VI ನೇ ತರಗತಿಗೆ ಜವಾಹರ್ ನವೋದಯ ವಿದ್ಯಾಲಯವನ್ನು ಪ್ರವೇಶಿಸಿದ ರಾಮ್ ಬಾಬು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಬಯಸಿದ್ದರಿಂದ ಭೋಪಾಲ್‌ನ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಿಗೆ ತರಬೇತಿ ನೀಡಲು ಮನವೊಲಿಸಿದರು. 2021 ರಲ್ಲಿ ಅವರು ರಾಷ್ಟ್ರೀಯ ರೇಸ್ ವಾಕ್ ಚಾಂಪಿಯನ್‌ಶಿಪ್‌ನಲ್ಲಿ 50 ಕಿಮೀ ಓಟದ ನಡಿಗೆ ಬೆಳ್ಳಿ ಪದಕವನ್ನು ಗೆದ್ದರು.
ಇದು ಅವರು ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ಸೇರಲು ದಾರಿ ಮಾಡಿಕೊಟ್ಟರು. ಸೆಪ್ಟೆಂಬರ್ 2021 ರಲ್ಲಿ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ನಲ್ಲಿ 35 ಕಿಮೀ ಓಟದ ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ರಾಮ್ ಬಾಬೂ ಕಳೆದ ವರ್ಷ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 35 ಕಿಮೀ ಸ್ಪರ್ಧೆಯಲ್ಲಿ ಚಿನ್ನ ಗೆದ್ದಾಗ ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಂತರ ಸೈನ್ಯಕ್ಕೆ ಸೇರಿಕೊಂಡರು. ಅಲ್ಲಿ ಅವರೀಗ ಹವಾಲ್ದಾರ್ ಆಗಿದ್ದಾರೆ.
— Parveen Kaswan, IFS (@ParveenKaswan) October 4, 2023