alex Certify ಪತಿಯನ್ನು ತುಂಡು ತುಂಡಾಗಿ ಕತ್ತರಿಸಿದ ಬಳಿಕ ಪ್ರಿಯಕರನ ಜೊತೆ ಹೋಳಿ ; ಪಾಪಿ ಪತ್ನಿ ವಿಡಿಯೋ ವೈರಲ್‌ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯನ್ನು ತುಂಡು ತುಂಡಾಗಿ ಕತ್ತರಿಸಿದ ಬಳಿಕ ಪ್ರಿಯಕರನ ಜೊತೆ ಹೋಳಿ ; ಪಾಪಿ ಪತ್ನಿ ವಿಡಿಯೋ ವೈರಲ್‌ | Watch

Meerut murder: Video shows accused wife celebrating Holi with lover in  Manali 11 days after killing husband | Northeast Herald

 

ಮೀರತ್‌ನಲ್ಲಿ ನಡೆದ ಭೀಕರ ಹತ್ಯೆ ಪ್ರಕರಣದಲ್ಲಿ, ಪತಿ ಸೌರಭ್ ರಜಪೂತ್‌ನನ್ನು ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಸಿಮೆಂಟ್ ಡ್ರಮ್‌ನಲ್ಲಿ ತುಂಬಿಟ್ಟಿದ್ದ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ನಂತರ, ಈ ಜೋಡಿ ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಮನಾಲಿ ಪ್ರವಾಸಕ್ಕೆ ಹೋಗಿ ಮೋಜು ಮಸ್ತಿ ಮಾಡಿದ್ದು ವೀಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮಾರ್ಚ್ 14 ರಂದು ಹೋಳಿ ಹಬ್ಬದಂದು ಈ ಜೋಡಿ ಬಣ್ಣ ಹಚ್ಚಿಕೊಂಡು ನಗುತ್ತಾ ಸಂಭ್ರಮಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಮುಸ್ಕಾನ್ ಸಾಹಿಲ್‌ಗೆ ಕೇಕ್ ತಿನ್ನಿಸುತ್ತಿರುವ ವಿಡಿಯೋ ಕೂಡಾ ಇದೆ. ಸೌರಭ್ ರಜಪೂತ್ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದು, ಮುಸ್ಕಾನ್ ಮತ್ತು ಸಾಹಿಲ್ ಈತನಿಗೆ ಮಾತ್ರೆಗಳನ್ನು ನೀಡಿ ಪ್ರಜ್ಞಾಹೀನನನ್ನಾಗಿ ಮಾಡಿ ಕೊಲೆ ಮಾಡಿದ್ದಾರೆ. ನಂತರ, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಸಿಮೆಂಟ್ ಡ್ರಮ್‌ನಲ್ಲಿ ತುಂಬಿಟ್ಟಿದ್ದಾರೆ.

2016ರಲ್ಲಿ ಮುಸ್ಕಾನ್ ಮತ್ತು ಸೌರಭ್ ಪ್ರೀತಿಸಿ ಮದುವೆಯಾಗಿದ್ದರು. ನಂತರ ಮುಸ್ಕಾನ್ ಮತ್ತು ಸಾಹಿಲ್ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. 2021ರಲ್ಲಿ ಸೌರಭ್‌ಗೆ ಈ ವಿಷಯ ತಿಳಿದಾಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕುಟುಂಬಸ್ಥರು ಸಮಾಧಾನಪಡಿಸಿದ ಬಳಿಕ ಪತ್ನಿಯೊಂದಿಗೆ ವಾಸಿಸಲು ಒಪ್ಪಿದ್ದರು.

2023ರಿಂದ ಲಂಡನ್‌ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸೌರಭ್, ತನ್ನ ಮಗಳ ಆರನೇ ಹುಟ್ಟುಹಬ್ಬವನ್ನು ಆಚರಿಸಲು ಫೆಬ್ರವರಿ 24ರಂದು ಮೀರತ್‌ಗೆ ಮರಳಿದ್ದರು. ಮುಸ್ಕಾನ್ ಹಲವು ತಿಂಗಳುಗಳಿಂದ ಸೌರಭ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಚಿಕನ್ ಕತ್ತರಿಸಲು ಬೇಕು ಎಂದು ಹೇಳಿ ಎರಡು ಚಾಕುಗಳನ್ನು ಖರೀದಿಸಿದ್ದಳು. ಅಲ್ಲದೆ ವೈದ್ಯರನ್ನು ಭೇಟಿಯಾಗಿ ಸೌರಭ್‌ಗೆ ನೀಡಲು ಮಾತ್ರೆಗಳನ್ನು ಪಡೆದಿದ್ದಳು.

ಸ್ನ್ಯಾಪ್‌ಚಾಟ್ ಖಾತೆ ತೆರೆದು ಡ್ರಗ್ಸ್‌ಗೆ ದಾಸನಾಗಿದ್ದ ಸಾಹಿಲ್‌ಗೆ ಆತನ ತಾಯಿ ಸತ್ತ ನಂತರ ಸ್ವರ್ಗದಿಂದ ಮಾತನಾಡುತ್ತಿದ್ದಾರೆ ಎಂದು ನಂಬಿಸಿದ್ದಳು. ನಂತರ ಸೌರಭ್‌ನನ್ನು ಕೊಲ್ಲಲು ಆತನ ತಾಯಿ ಹೇಳಿದ್ದಾರೆ ಎಂದು ನಂಬಿಸಿ ಕೊಲೆಗೆ ಪ್ರೇರೇಪಿಸಿದ್ದಳು. ಫೆಬ್ರವರಿ 25ರಂದು ಸೌರಭ್‌ನನ್ನು ಕೊಲ್ಲಲು ಪ್ರಯತ್ನಿಸಿದರೂ ವಿಫಲರಾದರು. ಮಾರ್ಚ್ 3ರಂದು ಮಾತ್ರೆಗಳನ್ನು ನೀಡಿ ಪ್ರಜ್ಞಾಹೀನನನ್ನಾಗಿ ಮಾಡಿ ಕೊಲೆ ಮಾಡಿದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಪ್ರವಾಸ ಮುಗಿಸಿ ಹಿಂತಿರುಗಿದ ನಂತರ ಮುಸ್ಕಾನ್ ತನ್ನ ತಾಯಿಗೆ ಸಾಹಿಲ್ ಮತ್ತು ತಾನು ಸೇರಿ ಸೌರಭ್‌ನನ್ನು ಕೊಲೆ ಮಾಡಿದ್ದು, ಆತ ಡ್ರಗ್ಸ್ ಸೇವನೆಗೆ ಅಡ್ಡಿಯಾಗುತ್ತಿದ್ದ ಎಂದು ಹೇಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...