alex Certify ವೇಶ್ಯಾವಾಟಿಕೆಗೆ ಸಂಪರ್ಕಿಸಿ ಎಂದು ಪತ್ನಿಯ ಫೋಟೋ, ಮೊಬೈಲ್ ನಂಬರ್ ಹಾಕಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಶ್ಯಾವಾಟಿಕೆಗೆ ಸಂಪರ್ಕಿಸಿ ಎಂದು ಪತ್ನಿಯ ಫೋಟೋ, ಮೊಬೈಲ್ ನಂಬರ್ ಹಾಕಿದ ಭೂಪ

ಮೀರತ್: ಉತ್ತರಪ್ರದೇಶದ ಮೀರತ್ ನಲ್ಲಿ ವರದಕ್ಷಿಣೆ ನೀಡದ ಪತ್ನಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿ ನಾಚಿಕೆಗೇಡು ಕೃತ್ಯವೆಸಗಿದ್ದಾನೆ. ಪತ್ನಿಯನ್ನು ಕಾಲ್ ಗರ್ಲ್ ಎಂದು ಹೆಸರಿಸಿ ಆಕೆಯ ಮೊಬೈಲ್ ನಂಬರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪೋರ್ನ್ ಸೈಟ್ ಗಳಲ್ಲಿ ಪೋಸ್ಟ್ ಮಾಡಿದ್ದಾನೆ.

ದಂಪತಿಗೆ ಮದುವೆಯಾಗಿ ಮೂರು ವರ್ಷವಾಗಿದ್ದು, ಪತ್ನಿಗೆ ಪೀಡಿಸುತ್ತಿದ್ದ ಆರೋಪಿ ಬೈಕ್ ಕೊಡಿಸಬೇಕು, ಹಣ ತಂದು ಕೊಡಬೇಕು ಎಂದು ಕಿರುಕುಳ ನೀಡಿದ್ದು, ಮದುವೆಯಾದಾಗಿನಿಂದ ಪತಿ ಮತ್ತು ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು.

ವರದಕ್ಷಿಣೆ ತಂದುಕೊಡದ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಆರೋಪಿ, ಆಕೆಯ ಹೆಸರಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಕಾಲ್ ಗರ್ಲ್ ಎಂದು ಮೊಬೈಲ್ ನಂಬರ್ ಪೋಸ್ಟ್ ಮಾಡಿದ್ದಾನೆ. ಗಂಡನೊಂದಿಗೆ ಜಗಳವಾಡಿದ ಪತ್ನಿ ವರ್ಷಗಳ ಹಿಂದೆಯೇ ತವರು ಸೇರಿಕೊಂಡಿದ್ದಾಳೆ.

ಮಹಿಳೆಗೆ ಅಪರಿಚಿತ ವ್ಯಕ್ತಿಗಳಿಂದ ಕರೆ ಬರಲಾರಂಭಿಸಿವೆ. ನಂತರ ಮುಂಡಾಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪತಿ ತನ್ನನ್ನು ಕಾಲ್ ಗರ್ಲ್ ಎಂದು ಕರೆದು ಅಶ್ಲೀಲ ಸೈಟ್‌ನಲ್ಲಿ ಫೋಟೋ, ಫೋನ್ ನಂಬರ್ ವೈರಲ್ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...