alex Certify ಹತ್ತಾರು ಕಾಯಿಲೆಗಳಿಗೆ ಮದ್ದು ಜಿಗಣೆ ಥೆರಪಿ; 40 ವರ್ಷಗಳಿಂದಲೂ ಈ ರಾಜ್ಯದಲ್ಲಿ ಬಹಳ ಫೇಮಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತಾರು ಕಾಯಿಲೆಗಳಿಗೆ ಮದ್ದು ಜಿಗಣೆ ಥೆರಪಿ; 40 ವರ್ಷಗಳಿಂದಲೂ ಈ ರಾಜ್ಯದಲ್ಲಿ ಬಹಳ ಫೇಮಸ್‌….!

ಔಷಧಿ ಮತ್ತು ಪ್ರಾರ್ಥನೆ ಎರಡೂ ಕೆಲಸ ಮಾಡಿದರೆ ಕಾಯಿಲೆ ಬೇಗನೆ ಗುಣವಾಗುತ್ತದೆ ಎಂಬ ಮಾತಿದೆ. ಹಾಗಾಗಿಯೇ ರೋಗಿಗಳು ಬಗೆಬಗೆಯ ಚಿಕಿತ್ಸೆಗಳ ಮೊರೆಹೋಗುತ್ತಾರೆ. ಅಲೋಪತಿ, ಹೋಮಿಯೋಪತಿ ಮತ್ತು ನ್ಯಾಚುರೋಪತಿಯಂತೆ ಲೀಚ್ ಚಿಕಿತ್ಸೆ ಕಾಶ್ಮೀರದಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಇದರಲ್ಲಿ ಜಿಗಣೆಗಳಿಂದ ಥೆರಪಿ ಮಾಡಲಾಗುತ್ತದೆ. ಇಂದಿಗೂ ನೂರಾರು ಜನರು ಇಲ್ಲಿ ಜಿಗಣೆ ಚಿಕಿತ್ಸೆ ಪಡೆಯುತ್ತಾರೆ.

ಪರ್ಷಿಯನ್ ಹೊಸ ವರ್ಷವಾದ ನೌರುಜ್ ಅನ್ನು ಕಾಶ್ಮೀರ ಕಣಿವೆಯಲ್ಲಿ ವಸಂತಕಾಲದ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ  ಕಣಿವೆಯ ನೂರಾರು ಜನರು ತಮ್ಮ ಕಾಯಿಲೆಗಳನ್ನು ದೂರಮಾಡಿಕೊಳ್ಳಲು ಜಿಗಣೆ ಚಿಕಿತ್ಸಾ ಕೇಂದ್ರಗಳಲ್ಲಿ ಸೇರುತ್ತಾರೆ. ಈ ಜನರು ಲೀಚ್ ಥೆರಪಿ ತುಂಬಾ ಪರಿಣಾಮಕಾರಿ ಎಂದು ನಂಬುತ್ತಾರೆ. ಇದರಿಂದ ಅನೇಕ ಪ್ರಮುಖ ರೋಗಗಳು ಗುಣವಾಗುತ್ತವೆ.

ಲೀಚ್ ಥೆರಪಿ ಎಂದರೇನು?

ಲೀಚ್ ಚಿಕಿತ್ಸೆಯು ಪ್ರಾಚೀನ ಈಜಿಪ್ಟಿನ ವಿಧಾನ. ರೋಗಿಗಳಿಗೆ ಚಿಕಿತ್ಸೆ ನೀಡಲು ಔಷಧೀಯ ಜಿಗಣೆಗಳನ್ನು ಬಳಸಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ಜಿಗಣೆಗಳು ಮೂರು ದವಡೆಗಳನ್ನು ಹೊಂದಿರುತ್ತವೆ. ಜಿಗಣೆಗಳ ಹಲ್ಲಿನಿಂದ ವ್ಯಕ್ತಿಯ ಚರ್ಮಕ್ಕೆ ಚುಚ್ಚಲಾಗುತ್ತದೆ. ಲಾಲಾರಸದ ಮೂಲಕ ಹೆಪ್ಪುರೋಧಕ ಔಷಧಗಳನ್ನು ಚುಚ್ಚುತ್ತಾರೆ. 20 ರಿಂದ 45 ನಿಮಿಷಗಳ ಕಾಲ ಈ ಚಿಕಿತ್ಸೆ ನೀಡಲಾಗುತ್ತದೆ.

ಈ ಜಿಗಣೆ ಚಿಕಿತ್ಸೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಹಲ್ಲಿನ ಸಮಸ್ಯೆಗಳು, ಚರ್ಮ ರೋಗಗಳು, ಸೋಂಕುಗಳು, ಸಂಧಿವಾತ, ದೀರ್ಘಕಾಲದ ತಲೆನೋವು ಮತ್ತು ಸೈನಸ್‌ ಚಿಕಿತ್ಸೆಗಾಗಿ ಸಹ ಅವುಗಳನ್ನು ಬಳಸಲಾಗುತ್ತದೆ.

ಅಲರ್ಜಿ, ಅಧಿಕ ರಕ್ತದೊತ್ತಡಕ್ಕೂ ಈ ಜಿಗಣೆ ಚಿಕಿತ್ಸೆಯಲ್ಲಿ ಪರಿಹಾರವಿದೆ. ಅಲೋಪತಿ ಔಷಧಿಗಳಿಂದ ಮಾಡಲಾಗದ ಕೆಲಸವನ್ನು ಲೀಚ್ ಥೆರಪಿ ಮಾಡಿದೆ ಎಂಬುದು ಚಿಕಿತ್ಸೆ ಪಡೆದವರ ಅಭಿಪ್ರಾಯ. ಜಿಗಣೆ ಥೆರಪಿ ರಕ್ತ ಶುದ್ಧೀಕರಣ ಚಿಕಿತ್ಸೆಯಾಗಿದ್ದು, ಅದು ದೇಹದಿಂದ ವಿಷಕಾರಿ ರಕ್ತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಔಷಧೀಯ ಜಿಗಣೆಗಳು ಅಶುದ್ಧ ರಕ್ತವನ್ನು ಹೀರುತ್ತವೆ ಮತ್ತು ರಕ್ತದಲ್ಲಿ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...