ಬೆಂಗಳೂರು: ವೈದ್ಯಕೀಯ /ದಂತವೈದ್ಯಕೀಯ ಕಾಲೇಜುಗಳಲ್ಲಿನ ಯುಜಿ ವೈದ್ಯಕೀಯ/ ದಂತವೈದ್ಯಕೀಯ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು ನಿಗದಿಸಿಪಡಿಸಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೆಬ್ ಸೈಟ್ ನನಲ್ಲಿ ಪ್ರಕಟಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ. ಎಂಇಡಿ/108/ಆರ್‌ಜಿಯು/2024 ದಿನಾಂಕ. 20.08.2024 ರ ಆದೇಶದಂತೆ 2024-25ನೇ ಸಾಲಿಗೆ ಸರ್ಕಾರಿ, ಖಾಸಗಿ ಹಾಗೂ ಡೀಮ್ಸ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರವ ವೈದ್ಯಕೀಯ / ದಂತವೈದ್ಯಕೀಯ ಕಾಲೇಜುಗಳಲ್ಲಿನ ಯುಜಿ ವೈದ್ಯಕೀಯ/ ದಂತವೈದ್ಯಕೀಯ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು ನಿಗದಿಸಿಪಡಿಸಲಾಗಿರುತ್ತದೆ. ಸದರಿ ಆದೇಶವನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.
ಆದರೆ ಕೆಲವೊಂದು ಖಾಸಗಿ ಕಾಲೇಜುಗಳು ತಮ್ಮ ಕಾಲೇಜಿಗೆ ಸಂಬಂಧಿಸಿದ ವೈದ್ಯಕೀಯ /ದಂತವೈದ್ಯಕೀಯ ಖಾಸಗಿ(ಪಿ) ಸೀಟುಗಳ ಶುಲ್ಕವನ್ನು ಕಡಿತಗೊಳಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದಾರೆ. ಅದರಂತೆ ಶುಲ್ಕವನ್ನು ಆಯಾ ಕಾಲೇಜುಗಳಿಗೆ ಪರಿಷ್ಕರಣೆಯನ್ನು ಮಾಡಲಾಗುತ್ತದೆ. ಯುಜಿ ವೈದ್ಯಕೀಯ / ದಂತವೈದ್ಯಕೀಯ ಕೋರ್ಸುಗಳಿಗೆ ಅರ್ಹರಿದ್ದು, ಆಪ್ಪನ್ ಎಂಟ್ರಿ ಮಾಡುವ ವಿದ್ಯಾರ್ಥಿಗಳು ನವೀಕೃತ ಶುಲ್ಕದ ಮಾಹಿತಿಯನ್ನು ಆಗಿಂದ್ದಾಗೆ ಪ್ರಾಧಿಕಾರದ ವೆಬ್‌ಸೈಟ್(http://kea.kar.nic.in)ನಲ್ಲಿ ವೀಕ್ಷಿಸುವಂತೆ ತಿಳಿಸಲಾಗಿದೆ.