ಬೆಂಗಳೂರು: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಕರೆದಿದ್ದ ಅರ್ಜಿ ವಾಪಸ್ ಪಡೆಯಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಂದ ಅರ್ಜಿ ವಾಪಸ್ ಪಡೆಯಲಾಗಿದೆ.
ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಪ್ಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿತ್ತು. ಅಧಿಸೂಚನೆಯನ್ನು ನಿರ್ದೇಶನಾಲಯ ಹಿಂಪಡೆದುಕೊಂಡಿದೆ. ಫೆಬ್ರವರಿ 5 ರಿಂದ 11 ರವರೆಗೆ ಅರ್ಜಿಯನ್ನು ನಿರ್ದೇಶನಾಲಯ ಆಹ್ವಾನಿಸಿತ್ತು. ತಾಂತ್ರಿಕ ಕಾರಣಗಳಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಅಧಿಸೂಚನೆ ವಾಪಸ್ ಪಡೆಯಲಾಗಿದ್ದು, ಪರಿಷ್ಕೃತ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.