ಬೆಂಗಳೂರು: ಬೆಂಗಳೂರು ನಗರದಲ್ಲಿ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಿರುವ ಬೆಂಗಳೂರು ಜಲಮಂಡಳಿ 50 ಕೆರೆಗಳಿಗೆ ಸಂಸ್ಕರಿತ ನೀರು ತುಂಬಿಸಲು ಯೋಜಿಸಿದೆ.
ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳಿಂದ 18 ಕೆರೆಗಳಿಗೆ ಸಂಸ್ಕರಿತ ನೀರನ್ನು ತುಂಬಿಸಲಾಗಿದೆ. ಈ ಸಂಖ್ಯೆಯನ್ನು ಇದೀಗ 50 ಕೆರೆಗಳಿಗೆ ನಿಗದಿಗೊಳಿಸಿ, ಯೋಜನೆ ರೂಪಿಸಲಾಗುತ್ತಿದೆ.
ನಗರದಲ್ಲಿ ಈಗ ಮಳೆಯಾಗುತ್ತಿದ್ದು, ಕೆರೆಗಳು ನೈಸರ್ಗಿಕವಾಗಿ ತುಂಬುತ್ತಿವೆ. ಆದರೆ, ಎಲ್ಲ ಕಾಲದಲ್ಲೂ ಇದೇ ಪರಿಸ್ಥಿತಿ ಇರುವುದಿಲ್ಲ. ನಿಯಂತ್ರಿತ ಮಾದರಿಯಲ್ಲಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.